ಎರಡನೇ ದಿನವೂ ಮುಂದುವರಿದ ಆಪ್​ ​ ಹೈಡ್ರಾಮಾ

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಜತೆಗಿನ ಸಿಎಂ ಅರವಿಂದ್ ಕೇಜ್ರಿವಾಲ್​ರ ತಿಕ್ಕಾಟ ಮುಂದುವರಿದಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ಇನ್ನೆರಡು ಆಪ್​ ನಾಯಕರು ಲೆಫ್ಟಿನೆಂಟ್ ಗವರ್ನರ್ ಮನೆಯಲ್ಲಿ ಧರಣಿ ಕೂತಿದ್ದಾರೆ. ಬೇಡಿಕೆಗಳನ್ನು ಈಡೇರಿಸೋ ತನಕ ಸ್ಥಳ ಬಿಟ್ಟು ಕದಡೋದಿಲ್ಲ ಎಂದು ಹೇಳಿದ್ದ ಕೇಜ್ರಿವಾಲ್ ಅದೇ ರೀತಿ ಮಾಡಿದ್ದಾರೆ. ಜೂನ್ 11 ರಂದು ನಡೆಸಿದ್ದ ಧರಣಿ ನಿನ್ನೆ ಕೂಡ ಮುಂದುವರಿಯಿತು. ನಿನ್ನೆ ರಾತ್ರಿ ಕೂಡ ಆಪ್​ ನಾಯಕರು ಲೆಫ್ಟಿನೆಂಟ್ ಗವರ್ನರ್ ಮನೆಯಲ್ಲೇ ಮಲಗಿದ್ದರು. ನಾವು ನಮ್ಮ ಪ್ರೀತಿಯ ದೆಹಲಿ ಜನತೆಗೋಸ್ಕರ ಈ ಧರಣಿ ನಡೆಸುತ್ತಿದ್ದೇವೆ. ಎಲ್​ಜಿ ಸರ್​, ಎಲ್ಲರೂ ಜೊತೆಗೂಡಿ ದೆಹಲಿಯನ್ನು ಅಭಿವೃದ್ಧಿಪಡಿಸೋಣ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್​ ಮತ್ತು ಬಿಜೆಪಿ ಆಪ್​ನ ಈ ಧರಣಿಯನ್ನು ಡ್ರಾಮಾ ಎಂದು ಕರೆದಿದೆ. ಆದ್ರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಆಪ್, ಇಂದು ಸಂಜೆ 4 ಗಂಟೆಗೆ ಕೇಜ್ರಿವಾಲ್ ನಿವಾಸದಿಂದ ಲೆಫ್ಟಿನೆಂಟ್ ಗವರ್ನರ್ ನಿವಾಸದ ತನಕ ಮೆರವಣಿಗೆ ನಡೆಸಲು ದೆಹಲಿಗರಿಗೆ ಕರೆ ಕೊಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ನನಗೆ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv