ನಿಧಿ ಇದ್ಯಂತೆ ನಿಧಿ..!

ಚಿಕ್ಕಮಗಳೂರು:  ಪಾಂಡವರು ಆಳ್ವಿಕೆ ನಡೆಸಿ ಪಗಡೆಯಾಡಿದ್ರು ಎಂಬ ಪ್ರತೀತಿ ಇರೋ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಿವನಿ ಹೋಬಳಿಯ ಹರಳಹಳ್ಳಿ ಸಮೀಪದ ಪಾಂಡವರ ಗುತ್ತಿ ಎಂಬ ಜಾಗದಲ್ಲಿ ನಿಧಿ ಇದೆ ಎಂದು ಭೂಮಿ ಅಗೆದಿದ್ದಾರೆ. ಈ ರೀತಿ ಕಳ್ಳರು ನಿಧಿಗಾಗಿ ಭೂಮಿ ಅಗೆದಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಎರಡ್ಮೂರು ಬಾರಿ ನಿಧಿಗಾಗಿ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಅಗೆದಿದ್ರು. ನಿನ್ನೆ ಬೆಳಗ್ಗಿನ ಜಾವ ಕೂಡ ಭೂಮಿ ಅಗೆದಿದ್ದಾರೆ. ಸುಮಾರು ಆರು ಅಡಿ ಆಳದ ಸಣ್ಣದಾದ ಬಾವಿಯಂತಿರೋ ಗುಂಡಿಗೆ ನಾಲ್ಕು ಕಲ್ಲನ್ನ ನೆಟ್ಟಿ ಮೇಲೆ ಒಂದು ಕಲ್ಲನ್ನ ಮುಚ್ಚಿದ್ದಾರೆ. ಆದ್ರೆ, ಕಳ್ಳರಿಗೆ ಮೇಲಿನ ಕಲ್ಲನ್ನ ಎತ್ತಲು ಸಾಧ್ಯವಾಗದೆ, ಸೈಡಿಗೆ ತಡೆಗೋಡಿಯಂತಿದ್ದ ಕಲ್ಲನ್ನ ಮುರಿದು ಆ ಗುಂಡಿಯ ಪಕ್ಕದಲ್ಲಿ ಸುಮಾರು ಎರಡ್ಮೂರು ಅಡಿ ಗುಂಡಿ ಕೊರೆದಿದ್ದಾರೆ. ಆದ್ರೆ, ಅವರಿಗೆ ನಿಧಿ ಸಿಕ್ತೋ ಇಲ್ವೋ ಗೊತ್ತಿಲ್ಲ. ಬೆಳಗ್ಗೆ ಜನ ಓಡಾಡುವಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳಿಯರಲ್ಲೂ ಕೂಡ ಕಳ್ಳರಿಗೆ ಏನಾದ್ರು ಸಿಕ್ಕಿದ್ಯೋ ಇಲ್ವೋ ಎಂಬ ಗೊಂದಲದಲ್ಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv