ಪ್ಲಾಸ್ಟಿಕ್ ಸಮಸ್ಯೆಗೆ ಅಮೆರಿಕಾ ವಿಜ್ಞಾನಿಗಳಿಂದ ಹೊಸ ಪರಿಹಾರ..!

ವಾಷಿಂಗ್ಟನ್‌: ಪ್ಲಾಸ್ಟಿಕ್ ಭೂಮಿಯ ಮೇಲೆ ಕೊಳೆಯದ ವಸ್ತುಗಳಲ್ಲಿ ಒಂದು. ಎಷ್ಟೆ ವರ್ಷ ಕಳೆದರೂ ಕರಗದ ಪ್ಲಾಸ್ಟಿಕ್​ನಿಂದ ಮನುಷ್ಯರಿಗಷ್ಟೆ ಅಲ್ಲದೆ ಪ್ರಾಣಿ-ಪಕ್ಷಿಗಳಿಗೂ ಮಾರಕವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಷ್ಟೆಲ್ಲಾ ದುಷ್ಪರಿಣಾಮಗಳಿದ್ದರೂ ಅದರ ಬಳಕೆ ಅನಿವಾರ್ಯ ಎನ್ನುವಂತಾಗಿದೆ. ಹೀಗಾಗಿ ಇದನ್ನೆಲ್ಲಾ ಮನಗಂಡಿರೋ ಅಮೆರಿಕಾ ವಿಜ್ಞಾನಿಗಳು ಹೊಸ ಪ್ಲಾಸ್ಟಿಕ್​ವೊಂದನ್ನು ಅವಿಷ್ಕರಿಸಿದ್ದಾರೆ.

ಹೊಸ ಜನರೇಷನ್ ಪ್ಲಾಸ್ಟಿಕ್ ತಯಾರಿಸುತ್ತಿದ್ದಾರೆ ವಿಜ್ಞಾನಿಗಳು
ಅಮೆರಿಕಾದ ವಿಜ್ಞಾನಿಗಳು ಹೊಸ ಬಗೆಯ ಪುನರ್ಬಳಕೆಯಾಗುವಂತಹ ಪ್ಲಾಸ್ಟಿಕ್ ತಯಾರಿಸಿರುವುದಾಗಿ ಹೇಳಿದ್ದಾರೆ. ಅಮೆರಿಕಾದ ಡಿಪಾರ್ಟ್‌ಮೆಂಟ್ ಆಫ್ ಎನರ್ಜಿ(ಡಿಓಇ) ಲಾವರೆನ್ಸ್‌ ಬೆರ್ಕ್‌ಲಿ ನ್ಯಾಷನಲ್ ಲ್ಯಾಬರೇಟರಿಯ ವಿಜ್ಞಾನಿಗಳು ಈ ರೀತಿಯ ಆವಿಷ್ಕಾರಕ್ಕೆ ಮುಂದಾಗಿದ್ದಾರ. ಈ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ರಿಸೈಕಲ್ ಮಾಡಬಹುದಾಗಿದೆ. ಇನ್ನು ಈಗಿರುವಂತಹ ಪ್ಲಾಸ್ಟಿಕ್‌ಗಳ ಪೈಕಿ ಕೇವಲ 20ರಿಂದ 30 ಪರ್ಸೆಂಟ್ ಮಾತ್ರ ಪುನರ್ಬಳಕೆ ಮಾಡಹುದಾಗಿದೆ. ಇದಕ್ಕೆ ಪರ್ಯಾಯವಾಗಿ ಯುಎಸ್‌ ವಿಜ್ಞಾನಿಗಳು ಹೊಸ ಬಗೆಯ ಪ್ಲಾಸ್ಟಿಕ್‌ನ ಆವಿಷ್ಕಾರ ಮಾಡಿದ್ದು, ಇದರಿಂದ ವಿಶ್ವದೆಲ್ಲೆಡೆ ಅತಿಯಾಗುತ್ತಿರುವ ಪ್ಲಾಸ್ಟಿಕ್​ ತ್ಯಾಜ್ಯವನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv