ಇಂಡಿಯನ್​ ಏರ್​​ಫೋರ್ಸ್​ ಏರ್​​ಸ್ಟ್ರೈಕ್​, ಪಾಟಾಕಿ‌ ಸಿಡಿಸಿ ವಿಜಯೋತ್ಸವ ಆಚರಣೆ

ಹುಬ್ಬಳ್ಳಿ: ಉಗ್ರರ ಅಡಗುತಾಣಗಳ ಮೇಲೆ ಭಾರತ ವಾಯು ಸೇನೆ ಯಶಸ್ವಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಎರಡನೇ ದಿನವೂ ವಿಜಯೋತ್ಸವ ಮುಂದುವರೆದಿದೆ.

ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ವಿಜಯೋತ್ಸವ ಆಚರಿಸುತ್ತಿದ್ದಾರೆ. ವಿಜಯನಗರದ ವಿಘ್ನೇಶ್ವರ ಹೈಸ್ಕೂಲ್ ಅಕ್ಷರ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮಾವರಣೆ ನಡೆಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾರತ ವಾಯು ಸೇನೆ ಪರ ಘೋಷಣೆ ಕೂಗಿ ಶಾಲೆ ಆವರಣದಲ್ಲಿ ಪಟಾಕಿ ಸಿಡಿ, ದೇಶದ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಅಲ್ಲದೇ ಇದೇವೇಳೆ ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ನಮ್ಮ ಸೈನಿಕರ ಮೇಲೆ ಆತ್ಮಾಹುತಿ ದಾಳಿ ಮಾಡಿದವರಿಗೆ ತಕ್ಕ ಉತ್ತರ ನೀಡಲಾಗಿದೆ. ಇದು ಹಾಗೇ ಮುಂದವರೆಯಬೇಕು. ಉಗ್ರರ ಅಡಗುತಾಣ ಸಂಪೂರ್ಣ ನಾಶಗೊಳಿಸಬೇಕು. ಇನ್ನಾದರೂ ಪಾಕಿಸ್ತಾನ ಉಗ್ರರನ್ನು ರಕ್ಷಣೆ ಮಾಡುವುದನ್ನು ಬೀಡಬೇಕು ಎಂದು ಅಗ್ರಹಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstne