11 Feb 2019
ಬೆಂಗಳೂರು: ಸ್ಕೂಲ್ ಬಸ್ಗೆ ಮತ್ತೊಂದು ಸ್ಕೂಲ್ ಬಸ್ ಡಿಕ್ಕಿ ಹೊಡೆದು 13 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಬಾಗಲೂರಿನಲ್ಲಿ ನಡೆದಿದೆ. ಡೆಲ್ಲಿ ಪಬ್ಲಿಕ್ ಸ್ಕೂಲ್ನ ಬಸ್ ಚಾಲಕ ಕುಡಿದ ಅಮಲಿನಲ್ಲಿ ಬಸ್ ಚಲಾಯಿಸಿ ನಾಗಾರ್ಜುನ ಕಾಲೇಜ್ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಕುಡಿದು ಬಸ್ ಚಲಾಯಿಸಿಕೊಂಡು ಬಂದ ಚಾಲಕ ಮೊದಲು ಬಾಗಲೂರು ಸಂತೆ ಬಳಿ ರಸ್ತೆ ಪಕ್ಕ ನಿಂತಿದ್ದ ನಾಗಾರ್ಜುನ ಕಾಲೇಜ್ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಮುಂದೆ ತೆರಳಿ ಟ್ರಾನ್ಸ್ ಫಾರ್ಮರ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ 13 ವಿದ್ಯಾರ್ಥಿಗಳು ಗಾಯಗೊಂಡಿದ್ದು, ನಿತೀಶ್ ಎಂಬ ವಿದ್ಯಾರ್ಥಿ ಕಾಲು ಮುರಿದಿದೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಎಸ್ಕೇಪ್ ಆಗಿದ್ದಾನೆ.
Follow us on:
YouTube: firstNewsKannada Instagram: firstnews_tv Face Book: firstnews.tv Twitter: firstnews_tv