ಕುಡಿದ ಅಮಲಿನಲ್ಲಿ ಸ್ಕೂಲ್​ ಬಸ್​ ಚಾಲನೆ, 13 ವಿದ್ಯಾರ್ಥಿಗಳಿಗೆ ಗಾಯ

ಬೆಂಗಳೂರು: ಸ್ಕೂಲ್​ ಬಸ್​ಗೆ ಮತ್ತೊಂದು ಸ್ಕೂಲ್​ ಬಸ್​ ಡಿಕ್ಕಿ ಹೊಡೆದು 13 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಬಾಗಲೂರಿನಲ್ಲಿ ನಡೆದಿದೆ. ಡೆಲ್ಲಿ ಪಬ್ಲಿಕ್ ಸ್ಕೂಲ್​ನ ಬಸ್​ ಚಾಲಕ ಕುಡಿದ ಅಮಲಿನಲ್ಲಿ ಬಸ್​ ಚಲಾಯಿಸಿ ನಾಗಾರ್ಜುನ ಕಾಲೇಜ್ ಬಸ್​ಗೆ ಡಿಕ್ಕಿ ಹೊಡೆದಿದ್ದಾನೆ. ಕುಡಿದು ಬಸ್​ ಚಲಾಯಿಸಿಕೊಂಡು ಬಂದ ಚಾಲಕ ಮೊದಲು ಬಾಗಲೂರು ಸಂತೆ ಬಳಿ ರಸ್ತೆ ಪಕ್ಕ ನಿಂತಿದ್ದ ನಾಗಾರ್ಜುನ ಕಾಲೇಜ್ ಬಸ್​ಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಮುಂದೆ ತೆರಳಿ ಟ್ರಾನ್ಸ್ ಫಾರ್ಮರ್​ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ 13 ವಿದ್ಯಾರ್ಥಿಗಳು ಗಾಯಗೊಂಡಿದ್ದು, ನಿತೀಶ್ ಎಂಬ ವಿದ್ಯಾರ್ಥಿ ಕಾಲು ಮುರಿದಿದೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಎಸ್ಕೇಪ್ ಆಗಿದ್ದಾನೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv