ಸ್ವಲ್ಪದರಲ್ಲೇ ರಿಚರ್ಡ್ ಪಾರು, ಕೊಂಚ ಯಾಮಾರಿದ್ರು ತಲೆ ಮೇಲೆ ಬಿಳ್ತಿತ್ತು ಮೆಟಲ್ ಬಾರು..

ಬ್ಯುಸಿನೆಸ್​ ಟೈಕೂನ್, ಲೇಖಕ ಹಾಗೂ ವರ್ಜಿನ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ರಿಚರ್ಡ್​​ ಬ್ರಾನ್ಸನ್​ ಇತ್ತೀಚೆಗೆ ಕೂದಲೆಳೆ ಅಂತರದಲ್ಲಿ ದೊಡ್ಡ ಅವಘಡದಿಂದ ಪಾರಾಗಿದ್ದಾರೆ. ಆಕಸ್ಮಿಕವಾಗಿ ಬಿದ್ದ ದೊಡ್ಡ ಮೆಟಲ್​ ಬಾರ್​ ಕೆಳಗೆ ಸಿಲುಕಿ ಅಪಾಯಕ್ಕೀಡಾಗೋದ್ರಿಂದ ರಿಚರ್ಡ್​ ಪಾರಾಗಿದ್ದಾರೆ.

ಫ್ಲೋರಿಡಾದ ಮಿಯಾಮಿಯಲ್ಲಿ ವರ್ಜಿನ್ ಮಿಯಾಮಿ ಸೆಂಟ್ರಲ್ ಸ್ಟೇಷನ್ ಉದ್ಘಾಟನೆ ವೇಳೆ ಈ ಅವಘಡ ನಡೆದಿದೆ. ರಿಚರ್ಡ್​ ಬ್ಯಾನರ್​​ ಓಪನ್ ಮಾಡೋ ಮೂಲಕ ಉದ್ಘಾಟನೆ ನೆರವೇರಿಸುತ್ತಿದ್ದರು. ಬ್ಯಾನರ್​​​ಗೆ ಸಪೋರ್ಟ್​ ಆಗಿದ್ದ ಹಗ್ಗಗಳನ್ನ ರಿಚರ್ಡ್​ ಹಿಡಿದುಕೊಂಡಿದ್ದರು. ಸುತ್ತಮುತ್ತ ಇದ್ದ ಕಂಪನಿಯ ಉದ್ಯೋಗಿಗಳು 10 ರಿಂದ ಎಣಿಸಲು ಶುರುಮಾಡಿದ್ರು. ಆದ್ರೆ ರಿಚರ್ಡ್​ ಹಗ್ಗವನ್ನ ಕೈಬಿಟ್ಟ ಗಳಿಗೆ ಮೆಟಲ್​ ಬಾರ್​​ ಸಮೇತ ಬ್ಯಾನರ್​ ಕೆಳಗೆ ಬಿದ್ದಿದೆ.

ಈ ವೇಳೆ ಕೆಳಗೆ ನಿಂತಿದ್ದ ರಿಚರ್ಡ್​​ಗಿಂತ ಕೆಲವೇ ಇಂಚುಗಳಷ್ಟು ದೂರದಲ್ಲಿ ಆ ಮೆಟಲ್​​ ಬಾರ್​ ಬಿದ್ದಿದೆ. ಈ ಮೈನವಿರೇಳಿಸೋ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ವತಃ ರಿಚರ್ಡ್​ ಇಂದು ಈ ವಿಡಿಯೋ ಹಂಚಿಕೊಂಡಿದ್ದಾರೆ. ಕೂದಲೆಳೆ ಅಂತರದಿಂದ ಮೆಟಲ್​ ಬಾರ್​ ಕೆಳಗೆ ಸಿಲುಕೋದ್ರಿಂದ ಪಾರಾದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv