ಎಸ್‌ಸಿ, ಎಸ್‌ಟಿ ನೌಕರರ ಹಿಂಬಡ್ತಿ: ಇಲಾಖಾ ವರದಿ ಕೇಳಿದ ಸಿಎಸ್ ರತ್ನಪ್ರಭಾ

ಬೆಂಗಳೂರು: ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಹಿಂಬಡ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ PWD ಇಲಾಖೆಯಿಂದ ವರದಿ ಕೇಳಿದ್ದಾರೆ. ಜೇಷ್ಠತಾ ಪಟ್ಟಿ ಲೋಪ ಸರಿಪಡಿಸುವಂತೆ ಎಸ್‌ಟಿ ಎಸ್‌ಸಿ ಎಂಜಿನಿಯರುಗಳ ಸಂಘ ಮನವಿ ಸಲ್ಲಿಸಿತ್ತು. ಬಿ.ಕೆ. ಪವಿತ್ರಾ ಪ್ರಕರಣದ ತೀರ್ಪಿನಂತೆ ಜೇಷ್ಠತಾ ಪಟ್ಟಿ ಸಿದ್ಧಪಡಿಸಲಾಗಿದೆ. ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ಪಟ್ಟಿ ಮಾಡಲಾಗಿದೆ. ಪಟ್ಟಿ ಸಿದ್ಧಪಡಿಸುವ ವೇಳೆ ಡಿಪಿಎಆರ್ ಮಾರ್ಗಸೂಚಿ ಪಾಲಿಸಿಲ್ಲ. ಹೀಗಾಗಿ ಜೇಷ್ಠತಾ ಪಟ್ಟಿಯ ನೂನ್ಯತೆ ಸರಿಪಡಿಸುವಂತೆ SC ST  ಎಂಜಿನಿಯರಗಳ ಸಂಘ ಮನವಿ ಮಾಡಿತ್ತು. ಮನವಿ ಹಿನ್ನೆಲೆ PWD ಇಲಾಖೆಯಿಂದ ಮುಖ್ಯಕಾರ್ಯದರ್ಶಿ ವರದಿ ಕೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv