ಕುಡ್ಯಾಕ್​​ ನೀರಿಲ್ಲ..ಊಟಕ್​​ ರೊಕ್ಕಿಲ್ಲ..ಕದ ಬೀಗ ಹಾಕೈತಿ..!

ಕೊಪ್ಪಳ: ಕುಡ್ಯಾಕ್​​ ನೀರಿಲ್ಲ..ಊಟಕ್ಕೆ​​ ರೊಕ್ಕಿಲ್ಲ..ಬಾಗ್ಲೂ​ ಬೀಗ ಹಾಕೈತಿ.. ಹಿಂಗಂತ ಪರಿಶಿಷ್ಟ ಜಾತಿ ಬಾಲಕರ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳು ಅಳಲು ತೋಡಿಕೊಳ್ತಿದ್ದಾರೆ. ಆದರೆ ಆ ಮಕ್ಕಳ ಗೋಳು ಮಾತ್ರ ಯಾರಿಗೂ ಕೇಳ್ತಿಲ್ಲ.
ಶಾಲೆಗಳು ಆರಂಭವಾದ್ರೂ ಗಂಗಾವತಿ ತಾಲೂಕಿನ ಸರೋಜಮ್ಮ ಕಾಲೋನಿಯಲ್ಲಿರುವ ಎಸ್ಸಿ ಸ್ಟೂಡೆಂಟ್​ ಹಾಸ್ಟೆಲ್​ನ ಬೀಗ ಇನ್ನು ತೆರೆದಿಲ್ಲ. ಹೀಗಾಗಿ ನಿನ್ನೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ದೂರದ ಗ್ರಾಮಗಳಿಂದ ಬಂದವರು. ಬೆಳಗ್ಗೆಯಿಂದ ಹಾಸ್ಟೆಲ್​​ ಎದುರು ಕಾದು ಕುಳಿತುಕೊಳ್ಳುವಂತಾಗಿತ್ತು. ಅಲ್ಲದೆ ಆ ವಿದ್ಯಾರ್ಥಿಗಳು ಕುಡಿಯೋಕೆ ನೀರು, ಊಟವಿಲ್ಲದೇ, ರಾತ್ರಿವರೆಗೂ ಕಾದು ಬಸವಳಿದರು. ಇನ್ನೂ ಹಾಸ್ಟೆಲ್​​ ವಾರ್ಡನ್​​​ ಗುರುಬಸಪ್ಪಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ವಂತೆ.