ಎಸ್ಸಿ ಜನಾಂಗಕ್ಕೆ ಮೀಸಲಿಟ್ಟ 980 ಕೋಟಿ ಹಣ ಎಲ್ಲಿ ಹೋಯ್ತು..?

ನೆಲಮಂಗಲ: ಕಾಂಗ್ರೆಸ್​ ಸರ್ಕಾರ ಎಸ್ಸಿ ಜನಾಂಗಕ್ಕೆ ಮೀಸಲಿಟ್ಟ 920 ಕೋಟಿ ಹಣ ದುರ್ಬಳಕೆ ಮಾಡಿದೆ ಅಂತಾ ಆರೋಪಿಸಿ ನೆಲಮಂಗಲ ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾ ಹಾಗೂ ಸ್ಲಂ ಮೋರ್ಚಾ ವತಿಯಿಂದ ಕಾಂಗ್ರೆಸ್​ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿದ್ರು. ಬೆಂಗಳೂರು ಗ್ರಾಮಾಂತರ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹೊಂಬಯ್ಯ ನೇತೃತ್ವದಲ್ಲಿ ಪ್ರೊಟೆಸ್ಟ್ ನಡೆಯಿತು. ಅಧಿಕಾರಿಗಳ ಮೇಲೆ ಸರ್ಕಾರ ಗೂಂಡಾಗಿರಿ ವರ್ತನೆ ತೂರುತ್ತಿದೆ. ಸರ್ವೆ ನಂ 202 ಗೋಮಾಳ ಜಾಗ ಅಂಬೇಡ್ಕರ್ ಕಾಲೋನಿಯಲ್ಲಿ ಕಳೆದ 2005 ರಲ್ಲಿ ಎಸ್ಸಿ ಜನಾಂಗದ ಬಡಜನರಿಗೆ ನೀಡಿರುವ ಜಾಗವನ್ನ ಖಾತೆ ಮಾಡಿಕೊಡದೆ ಹಕ್ಕು ಪತ್ರಗಳನ್ನು ವಿತರಿಸದೆ ನಿರ್ಲಕ್ಷ್ಯ ಮಾಡಿದೆ ಅಂತಾ ಆರೋಪಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಜಾಥಾ ಮೂಲಕ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ಕೂಡಲೇ ಹಕ್ಕು ಪತ್ರಗಳನ್ನ ಹಿಂದುಳಿದ ಜನರಿಗೆ ನೀಡಬೇಕು ಅಂತಾ ಆಗ್ರಹಿಸಿದ್ರು.

Leave a Reply

Your email address will not be published. Required fields are marked *