ರೆಪೋ ದರ ಕಡಿತದ ಬೆನ್ನಲ್ಲೇ SBI ಗ್ರಾಹಕರಿಗೆ ಗುಡ್ ​ನ್ಯೂಸ್!

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೇ. 0.25 ರಷ್ಟು ರೆಪೋ ದರ ಕಡಿತಗೊಳಿಸಿದ ಎರಡೇ ದಿನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. 30 ಲಕ್ಷದವರೆಗೆ ಗೃಹ ಸಾಲ ಹೊಂದಿರುವ ಗ್ರಾಹಕರಿಗೆ ಹೊಸ ರಿಪೋ ರೇಟ್ ಅಡಿಯಲ್ಲಿ ಬಡ್ಡಿದರವನ್ನು ಕಡಿಮೆ ಮಾಡಿದೆ. ನಮ್ಮ ಬ್ಯಾಂಕ್ ಗೃಹ ಸಾಲದಲ್ಲಿ ಅತ್ಯಂತ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ. ಆರ್​ಬಿಐನ ನೀತಿ ಆಧಾರದಲ್ಲಿ 30 ಲಕ್ಷದವರೆಗೆ ಗೃಹ ಸಾಲದ ತೆರಿಗೆ ದರವನ್ನು ಕಡಿತಗೊಳಿಸಲಾಗಿದೆ ಅಂತಾ ಬ್ಯಾಂಕ್​ನ ಚೇರ್​ಮ್ಯಾನ್ ರಜನೀಶ್ ಕುಮಾರ್ ಹೇಳಿದ್ದಾರೆ. ಇನ್ನು ಈ ಹೊಸ ಬಡ್ಡಿದರ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.