ಮದುವೆ ಬಳಿಕ ‘ಯುವರತ್ನ’ ನ ಸೇರಿದ ಸಾಯೇಷಾ..!

‘ಸಾಯೇಷಾ ಸೈಗಲ್’.. ಬಾಲಿವುಡ್​​ ಸೇರಿದಂತೆ ಸೌತ್​ ಇಂಡಿಯಾದಲ್ಲಿ ಮಿಂಚುತ್ತಿರೋ ಮಿಂಚುಳ್ಳಿ ಚೆಲುವೆ. ತೆಲುಗಿನ ‘ಅಖಿಲ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಯೇಷಾ, ಈಗ ಬಿಗ್ ಸ್ಟಾರ್ಸ್​ ಜೊತೆ ನಟಿಸಿದ್ದಾರೆ. ಇತ್ತೀಚೆಗಷ್ಟೇ ನಟ ಆರ್ಯ ಜೊತೆ ಸಪ್ತಪದಿ ತುಳಿದಿದ್ದ ಬೆಡಗಿ ಇದೀಗ ‘ಯುವರತ್ನ’ನ ಜೊತೆಯಾಗಿದ್ದಾರೆ. ಹೌದು, ಸಂತೋಷ್ ಆನಂದ್​ರಾಮ್ – ಅಪ್ಪು ಕಾಂಬಿನೇಷನ್​ನ​ ‘ಯುವರತ್ನ’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸಾಯೇಷಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.
‘ಯುವರತ್ನ’ನ ಜೊತೆ ಸಾಯೇಷಾ ಡ್ಯೂಯೆಟ್..!
ಇದೊಂದು ಪಕ್ಕಾ ರೊಮ್ಯಾಂಟಿಕ್​ ಕಂ ಆ್ಯಕ್ಷನ್ ಸಿನಿಮಾವಾಗಿದ್ದು, ಪವರ್​​ ಸ್ಟಾರ್​ ಅಪ್ಪು ಕಾಲೇಜು ಹುಡುಗನಾಗಿ ಯಂಗ್ ಅಂಡ್ ಎನರ್ಜಿಟಿಕ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಾಯೇಷಾ ಕೂಡ ಬೋಲ್ಡ್ ಕ್ಯಾರೆಕ್ಟರ್​ನಲ್ಲಿ ನಟಿಸ್ತಿದ್ದು, ಯುವರತ್ನನ ಜೊತೆಯಾಗಿ ಕಮಾಲ್ ಮಾಡೋಕೆ ಸಿದ್ಧರಾಗುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಸೇರಿದಂತೆ ಹಲವೆಡೆ ಚಿತ್ರೀಕರಣ ಮುಗಿಸಿದ್ದು, ಮುಂದಿನ ದಿನಗಳಲ್ಲಿ ವಿದೇಶದಲ್ಲೂ ಶೂಟಿಂಗ್ ನಡೆಸೋಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಇನ್ನು ಚಿತ್ರದಲ್ಲಿ ಡಾಲಿ ಧನಂಜಯ್, ರಾಧಿಕಾ ಶರತ್ ಕುಮಾರ್, ವಸಿಷ್ಠ ಸಿಂಹ ಸೇರಿದಂತೆ ದೊಡ್ಡ ತಾರಾಗಣವಿದೆ. ವಿಶೇಷ ಅಂದ್ರೆ ರಾಜಕುಮಾರ ಚಿತ್ರದ ಯಶಸ್ಸಿನ ಬಳಿಕ ಅಪ್ಪು ಹಾಗೂ ಸಂತೋಷ್ ಜೋಡಿ ಒಂದಾಗಿದ್ದ,  ವಿಜಯ್ ಕಿರಂಗದೂರು ಬಂಡವಾಳ ಹೂಡಿದ್ದಾರೆ. ಒಟ್ಟಾರೆ ಇಲ್ಲವೂ ಅಂದುಕೊಂಡಂತೆ ಆದ್ರೆ ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ದರ್ಶನ ಕೊಡುವ ನಿರೀಕ್ಷೆಯಿದೆ.