ಚುನಾವಣೆ ಬೆಟ್ಟಿಂಗ್ ಮಾಡಬೇಡಿ, ಇದನ್ನು ನಾನು ಖಂಡಿಸುವೆ: ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಚುನಾವಣೆ ಫಲಿತಾಂಶದ ಮೇಲೆ ಬೆಟ್ಟಿಂಗ್ ಮಾಡಬೇಡಿ, ಇದನ್ನು ನಾನು ಖಂಡಿಸುವೆ ಎಂದು ಮಂಡ್ಯ ಲೋಕಸಭೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸಹಕಾರದಿಂದ ಚುನಾವಣೆ ಎದುರಿಸಿರುವೆ, ಹೀಗಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸುವೆ. ದ್ವೇಷದ ರಾಜಕಾರಣ ನಮ್ಮ ಕುಟುಂಬಕ್ಕೆ ಅನಿವಾರ್ಯವಲ್ಲ. ಇನ್ನೂ ನಮ್ಮ ವಿರೋಧಿಗಳು ಆರೋಪ ಮಾಡೋದನ್ನ ನಿಲ್ಲಿಸಿಲ್ಲ. ಆದ್ರೆ ನಾನು ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ. ನಾವು ಯಾವ ರೀತಿ ಅವರನ್ನ ಟಾರ್ಗೆಟ್ ಮಾಡ್ತಾ ಇದ್ದೀವಿ..? ನಾನು ನಮ್ಮ ಸಮಯ ವೇಸ್ಟ್ ಮಾಡಲು ರೆಡಿ ಇಲ್ಲ ಎಂದರು.

ಜಿಲ್ಲೆಗೆ ಬಜೆಟ್‌ನಲ್ಲಿ ಸಿಎಂ ಕುಮಾರಸ್ವಾಮಿ ಹೆಚ್ಚು ಅನುದಾನ ನೀಡಿದ್ದಾರೆ, ಅದನ್ನು ಅನುಷ್ಠಾನಕ್ಕೆ ತರಲು ಗಮನ ಹರಿಸುವೆ. ನಾನು ಗ್ರೌಂಡ್ ರಿಯಾಲಿಟಿ ಮೇಲೆ ಹೋಗುವ ವ್ಯಕ್ತಿ. ಇನ್ನು ಮಾಧ್ಯಮಗಳು ನಮ್ಮ ಮೇಲೆ ಚೆಕ್ ಇಟ್ಟಿದ್ದೀರಿ. ಆದ್ರೂ  ಜನ ನಮ್ಮ ಕುಟುಂಬ ಕೈ ಬಿಡುವುದಿಲ್ಲ ಎಂದು ನನಗೆ ವಿಶ್ವಾಸ ಇದೆ. ಮೈತ್ರಿ ವಿಶ್ವಾಸದಲ್ಲಿ ಗೊಂದಲ ಇತ್ತು, ಅದನ್ನ ಹಿರಿಯ ನಾಯಕರು ಸರಿ ಮಾಡಿದ್ದಾರೆ ಅಂತಾ ಇದೇ ವೇಳೆ ನಿಖಿಲ್​ ತಿಳಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv