ಜಾರಕಿಹೊಳಿ ‘ಸಹೋದರರ ಸವಾಲ್​’​ ಅಂತಿಮಘಟ್ಟಕ್ಕೆ, 6 ತಿಂಗಳ ನಂತ್ರ ಫೈನಲ್ ಮ್ಯಾಚ್..!

ಬೆಳಗಾವಿ: ಗೋಕಾಕ್ ತಾಲೂಕಿನಲ್ಲಿ ಕಾಂಗ್ರೆಸ್ ಬೆಳೆಸಿದ್ದು ನಾನು. ನಂತರ ರಮೇಶ್ ಜಾರಕಿಹೊಳಿ ಅವರ ಕೈಯಲ್ಲಿ ಕೊಟ್ಟೆ. ಈ  ಚುನಾವಣೆ ಫ್ರೀ ಬಿಟ್ರೆ ಯಾರ ಶಕ್ತಿ ಏನು ಎಂಬುದು ಗೊತ್ತಾಗಲಿದೆ ಅಂತಾ ಸಚಿವ ಸಚಿವ ಸತೀಶ ಜಾರಕಿಹೊಳಿ ತಮ್ಮ ಸಹೋದರ ರಮೇಶ್ ಜಾರಕಿಹೊಳಿಗೆ ಪರೋಕ್ಷವಾಗಿ ಸವಾಲ್​  ಹಾಕಿದ್ದಾರೆ.

ರಮೇಶ ಈಗಾಗ್ಲೇ ಬಿಜೆಪಿ ಬೆಂಬಲಿಸುವಂತೆ ಸೂಚನೆ‌ ಕೊಟ್ಟಿದ್ದಾರೆ:
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಕಾಕ್ ಶಾಸಕರು ನಮ್ಮ ಪಕ್ಷದ ಜತೆಗೆ ಇಲ್ಲ‌.  ಹೀಗಾಗಿ ನಾನು ಅನಿವಾರ್ಯವಾಗಿ ಗೋಕಾಕ್​ನಲ್ಲಿ ಪ್ರಚಾರ ನಡೆಸಬೇಕಾಗಿದೆ. ಈಗಾಗಲೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಪಕ್ಷದಿಂದ ಹೊರಗೆ ಹೋಗಿದ್ದಾರೆ. ರಮೇಶ ಜಾರಕಿಹೊಳಿ ನಿನ್ನೆ ಗೋಕಾಕ್ ನಗರದಲ್ಲಿ ಸಭೆ ಮಾಡಿ ಬಿಜೆಪಿ ಬೆಂಬಲಿಸುವಂತೆ ಸೂಚನೆ‌ ಕೊಟ್ಟಿದ್ದಾರೆ. ಹೀಗಾಗಿ ಮಾಜಿ ಸಚಿವ‌ ರಮೇಶ್​ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್​​ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೂರು ನೀಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡ್ರು ಅಷ್ಟೇ ಬಿಟ್ರೂ ಅಷ್ಟೆ.

 ಲೋಕಸಭೆ ಚುನಾವಣೆ ನನಗೆ ಸೆಮಿಫೈನಲ್, 6 ತಿಂಗಳ ನಂತ್ರ ಫೈನಲ್ ಮ್ಯಾಚ್:
20 ವರ್ಷದಿಂದ ಗೋಕಾಕ್ ರಮೇಶ್ ಜಾರಕಿಹೊಳಿ ಹಿಡಿತದಲ್ಲಿ ಇತ್ತು. ಈ ಚುನಾವಣೆ ಸ್ವಲ್ಪ ಗೊಂದಲ ಆಗೋದು ಸಹಜ. ಪಕ್ಷದ ಪರ ಇರೋ ಕಾರ್ಯಕರ್ತರು ಗೋಕಾಕ್ ನಲ್ಲಿ ಇದ್ದಾರೆ. ಲೋಕಸಭೆ ಚುನಾವಣೆ ನಮಗೆ ಸೆಮಿಫೈನಲ್. ಮುಂದೆ ಫೈನಲ್ ಪಂದ್ಯವಾಳಿ ಇದೆ. 6 ತಿಂಗಳು ಅವಕಾಶ ಇದ್ದು ಸಿದ್ಧತೆ ಮಾಡಿಕೊಳ್ಳುತ್ತೇವೆ. ಫೈನಲ್ ಮ್ಯಾಚ್ ಬಗ್ಗೆ ಹೆಚ್ಚು ಇಂಟ್ರಸ್ಟ್ ಇದೆ ನಮಗೆ. ಕಾರ್ಯಕರ್ತರು ನಮ್ಮ ಜತೆಗಾ ಅಥವಾ ಅವರೊಟ್ಟಿಗೇ ಗುರುತಿಸಿಕೊಳ್ಳಬೇಕು ಅಂತಾ ಇದೆ ವೇಳೆ ಸತೀಶ ಜಾರಕಿಹೊಳಿ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv