‘ಕೆಲಸ ಮಾಡಿದೆ ಮೋದಿ ಔಷಧಿ, ಒಂದಾಗಿದ್ದೇವೆ ಕೈ-ತೆನೆ ಮಂದಿ’ ಸತೀಶ್ ಜಾರಕಿಹೊಳಿ ಅಭಿಮತ

ಬೆಳಗಾವಿ: ಕಾಂಗ್ರೆಸ್- ಜೆಡಿಎಸ್ ಒಂದಾಗಲು ಯಾವುದೇ ಔಷಧಿ ನಾಟಿರಲಿಲ್ಲ. ಸದ್ಯ ಮೋದಿ ನೀಡಿರೋ ಔಷಧಿ ಫಲ ನೀಡಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಜೆಡಿಎಸ್- ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಇತ್ತು. ಆದರೆ ಮೋದಿ ಹೊಡೆತದಿಂದ ನಾವೆಲ್ಲಾ ಒಂದಾಗಿದ್ದೇವೆ. ಮೇ 29ರಂದು ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯಲಿದೆ. ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ -ಜೆಡಿಎಸ್ ಸಿದ್ಧತೆ ನಡೆಸಿದೆ. ಕಾಂಗ್ರೆಸ್-ಜೆಡಿಎಸ್ ರಿವರ್ಸ್ ಆಪರೇಷ್ ಮಾಡಲು ಸಿದ್ದತೆ ನಡೆದಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೋದಿ ಗಾಳಿ ವರ್ಕ್ ಆಗಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋ ವಿಚಾರ ಸದ್ಯ ಕ್ಲೋಸ್​ ಆಗಿದೆ. ನಾಲ್ಕು ವರ್ಷ ಈಗ ಲೆಫ್ಟ್, ರೈಟ್ ಅಂತಾ ಒಂದೇ ಲೈನ್‌ನಲ್ಲಿ ಹೋಗಬೇಕು. ಕಮಾಂಡರ್ ಹೇಳಿದ ಹಾಗೆ ಪರೇಡ್ ಮಾಡೋದು ಅಷ್ಟೆ. ದೇಶದಲ್ಲಿ ಮೋದಿ ಅಲೇ ಇದೆ ಎಂದು ಒಪ್ಪಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಪಟ್ಟಂತೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್‌ಗೆ ಮಂತ್ರಿ ಆಫರ್ ಕೊಟ್ಟು 2 ತಿಂಗಳಾಯಿತು. ಮಂತ್ರಿ ಅಲ್ಲ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಸ್ಥಾನದ ಆಫರ್ ಕೊಟ್ರು ರಮೇಶ್‌ ಬರಲ್ಲ‌. ಸಚಿವ ಸ್ಥಾನ ಅಲ್ಲ. ನಿಮ್ಮ ಸಿಎಂ ಸ್ಥಾನ ಕೊಟ್ರು ಅವನು ಸರ್ಕಾರ ಅಲುಗಾಡಿಸುವವನೇ.. ಎಂದು ನಮ್ಮ ನಾಯಕರಿಗೆ ಹೇಳಿದ್ದೇನೆ. ನಿನ್ನೆ ಸಿಎಂ ಕುಮಾರಸ್ವಾಮಿ ‌ಅವರಿಗೆ ಹೇಳಿದ್ದೇನೆ. ರಮೇಶ್ ಜಾರಕಿಹೊಳಿ ನಮ್ಮ ಪಕ್ಷದಿಂದ ಹೊರಗಡೆ ಕಾಲಿಟ್ಟು ಬಹಳ ದಿನ ಆಯ್ತು ಎಂದು ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಇದೇ ವೇಳೆ ಮಾತನಾಡುತ್ತಿದ್ದ ಅವರು, ರಮೇಶ್ ಜಾರಕಿಹೊಳಿಯ ಹಳೆಯ ಪಿಕ್ಚರ್. ಇನ್ನೂ‌ ರಿಲೀಸ್‌ ಆಗಿಲ್ಲ. ರಿಲೀಸ್ ಆಗೋದು ಡೌಟ್. ಪಿಕ್ಚರ್ ಹಳೆದು ಆದ್ರೂ, ಇನ್ನೂ ರಿಲೀಸ್ ಆಗಿಲ್ಲ. ಬಹಳಷ್ಟು ಜನ ಪಿಕ್ಚರ್ ತೆಗೆದು ಡಬ್ಬದಲ್ಲಿ ಇಟ್ಟಿರ್ತಾರೆ, ಹಾಗೇ ರಮೇಶ್ ಜಾರಕಿಹೊಳಿ ಪಿಕ್ಚರ್ ಕೂಡ. ರಾಜೀನಾಮೆ ಕೊಡ್ತಿನಿ ಕೊಡ್ತಿನಿ ಅಂತಾರೆ. ಕೊಡೋದು‌ ಯಾವಾಗ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ರು. ಗೋಕಾಕನಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದಿದ್ದೇವೆ. ಅಳಿಯ-ಮಾವನ ನಡುವೆ ಅಷ್ಟೊಂದು ಹೆಚ್ಚಿನ ಮತಗಳು ನಮಗೆ ಬಂದಿರೋದು ಅದೊಂದು ಎಂಟನೇ ಅದ್ಭುತ. ಮೋದಿ ಗಾಳಿ, ಏರಸ್ಟ್ರೈಕ್ ಈ ಚುನಾವಣೆಯಲ್ಲಿ ಕೆಲಸ ಮಾಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಘಟಾನುಘಟಿ ನಾಯಕರು ಸೋತಿದ್ದಾರೆ. ಇದರ ನೈತಿಕತೆ ಹೊಣೆ ಯಾರು ಹೊರುವ ಅವಶ್ಯಕತೆ ಇಲ್ಲ ಎಂದರು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv