‘ರಮೇಶ್​ ಜಾರಕಿಹೊಳಿ ಯಾವುದೋ ವಸ್ತು ಕಳೆದುಕೊಂಡಿದ್ದಾರೆ’

ಬೆಳಗಾವಿ: ರಮೇಶ್​ ಜಾರಕಿಹೊಳಿ ಯಾವುದೋ ವಸ್ತು ಕಳೆದುಕೊಂಡಿದ್ದಾರೆ. ಅದಕ್ಕಾಗಿಯೇ ಈ ರೀತಿ ವರ್ತಿಸುತ್ತಿದ್ದಾರೆ ಅಂತಾ ಸಚಿವ ಸತೀಶ್​ ಜಾರಕಿಹೋಳಿ ಹೇಳಿದ್ದಾರೆ. ರಮೇಶ್​ ಜಾರಕಿಹೊಳಿ ರಾಜೀನಾಮೆ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ನಾನು ಅಳುವುದಿಲ್ಲ. ರಮೇಶನೇ ಡ್ರಾಮಾ ಮಾಸ್ಟರ್. ಅಲ್ಲದೇ, ನಾನು ರಮೇಶ್​ ಜಾರಕಿಹೊಳಿ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವನ್ನೊಬ್ಬ ಅಪ್ಪಟ ಸುಳ್ಳುಗಾರ, ಬದ್ಧತೆ ಇಲ್ಲದ ಶಾಸಕ. ಇವತ್ತು ಈ ರೀತಿ ಹೇಳುತ್ತಾನೆ, ಮತ್ತೆ ನಾಳೆ ಮತ್ತೊಂದು ಹೇಳುತ್ತಾನೆ. ಯಮಕನಮರಡಿ ಚುನಾವಣೆಗೆ ಇನ್ನೂ ನಾಲ್ಕು ವರ್ಷ ಕಾಲಾವಕಾಶ ಇದೆ. ಅವಾಗ ಏನಾಗೋತ್ತೋ ನೋಡೋಣ. ಸದ್ಯಕ್ಕೆ ಅದರ ಬಗ್ಗೆ ಚರ್ಚೆ ಬೇಡ ಅಂತಾ ಹೇಳಿದ್ರು.

ಇದೇ ವೇಳೆ, ನನ್ನ ಮೇಲಿನ ಆರೋಪ‌ ನಿರಾಧಾರ. ಮೊದಲು ರಮೇಶ್​ ಯಾವುದಾದರೂ ಒಂದು ಪಕ್ಷವನ್ನ ಆಯ್ಕೆ ಮಾಡಲಿ. ಕಾಂಗ್ರೆಸ್ ನಲ್ಲಿದ್ದುಕೊಂಡು ಬಿಜೆಪಿ ಪ್ರಚಾರ ಮಾಡುವುದು ಸರಿಯಲ್ಲ. ಮೊದಲು ಕಾಂಗ್ರೆಸ್​ನಲ್ಲಿ ಇರಲಿ ಎನ್ನುವುದು ನಮ್ಮ ಬಯಕೆ. ಒಂದು ವೇಳೆ ಅವರು ರಾಜೀನಾಮೆ ನೀಡಿದ್ರೆ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಅಂತಾ ಸತೀಶ್​ ಜಾರಕಿಹೊಳಿ ಹೇಳಿದ್ರು. ಜೊತೆಗೆ, ಪಿಎಲ್​ಡಿಇ ಚುನಾವಣೆ ವಿಚಾರದಲ್ಲಿ, ಸಿಎಂ ನೇತೃತ್ವದಲ್ಲಿ ಭಿನ್ನಮತ ಶಮನ ಸಭೆ ನಡೆಯಿತು. ಡಿ.ಕೆ ಶಿವಕುಮಾರ್​ ಜಿಲ್ಲೆಯ ಹಸ್ತಕ್ಷೇಪದ ಬಗ್ಗೆ ರಮೇಶ ಜಾರಕಿಹೊಳಿ ಜೊತೆ ಮಾತುಕತೆ ನಡೆದಿದ್ದು‌ ನಿಜ ಅಂತಾ ಸತೀಶ್​ ಜಾರಕಿಹೊಳಿ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv