ಎರಡು ದಿನಗಳ ಹಿಂದಿನ ಸತೀಶ್ ಜಾರಕಿಹೊಳಿ ಆಡಿಯೋ ವೈರಲ್

ಬೆಳಗಾವಿ: 20 ವರ್ಷದ ಹಿಂದೆ ರಮೇಶ್​​ ಜಾರಕಿಹೊಳಿ ಮಗ ಸಂತೋಷನನ್ನ ಆಡಿಸಲು ಬಂದವನು ಇಂದು ನಮ್ಮನ್ನೇ ಆಳುತ್ತಿದ್ದಾನೆ. ಗೋಕಾಕ್​ ಮತ ಕ್ಷೇತ್ರಕ್ಕೆ ಅಂಬಿರಾಯ ಸೂಪರ್ ಎಂಎಲ್ಎ ಆಗಿದ್ದಾನೆ ಎಂದು ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಹೇಳಿರುವ ಆಡಿಯೋ ವೈರಲ್​ ಆಗಿದೆ.

ಎರಡು ದಿನಗಳ ಹಿಂದೆ ಗೋಕಾಕ್ ಪ್ರಚಾರ ಕಾರ್ಯಕ್ರಮದಲ್ಲಿ ಸತೀಶ್​ ಜಾರಕಿಹೊಳಿ ಮಾಡಿದ ಭಾಷಣದಲ್ಲಿ, ರಮೇಶ್​​ ಜಾರಕಿಹೊಳಿ ಕಾಂಗ್ರೆಸ್ ತೊರೆಯಲು ಅಂಬಿರಾಯ ಪಾಟೀಲ್ ಕಾರಣ. ಅಂಬಿರಾಯ ಪಾಟೀಲ್ ತಮ್ಮ ಅಣ್ಣನಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸಲು ರಮೇಶ್​​​ ಜಾರಕಿಹೊಳಿಯನ್ನ ಬಿಜೆಪಿಗೆ ಹೋಗುವಂತೆ ಮಾಡುತ್ತಿದ್ದಾರೆ. ಇದನ್ನ ನಾನು ಮೊದಲಿನಿಂದಲೂ ವಿರೋಧ ಮಾಡುತ್ತಲೇ ಬಂದಿದ್ದೇನೆ. ಗೋಕಾಕ್ ಕ್ಷೇತ್ರಕ್ಕೆ ಅಂಬಿರಾಯ ಅನ್ಯಾಯ ಮಾಡುತ್ತಲೇ ಬಂದಿದ್ದಾನೆ. ಇತ್ತೀಚಿಗೆ ಒಂದು ವಿಚಾರಕ್ಕೆ ತಹಶೀಲ್ದಾರ್​​ಗೆ ಪೋನ್ ಮಾಡಿದ್ರೆ, ಅಂಬಿರಾಯಗೆ ಫೋನ್ ಮಾಡಿ ಅಂತಾರೆ ಎಂದು ಸತೀಶ್​​ ಜಾರಕಿಹೊಳಿ ಹೇಳಿರುವ ಭಾಷಣ ವೈರಲ್ ಆಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv