ಪುನೀತ್ ನಿರ್ಮಾಣದಲ್ಲಿ ಸತ್ಯಪ್ರಕಾಶ್ ಸಿನಿಮಾ..!

ಇತ್ತಿಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ನಿರ್ಮಾಣದ ಪಿಆರ್​ಕೆ ಬ್ಯಾನರ್​ನಲ್ಲಿ ಕವಲುದಾರಿ ಸಿನಿಮಾ ತೆರೆಕಂಡು ಯಶಸ್ಸು ಗಳಿಸಿತ್ತು. ಇದೀಗ ಇದೇ ಬ್ಯಾನರ್​ನಲ್ಲಿ ನಿರ್ದೇಶಕ ಸತ್ಯಪ್ರಕಾಶ್​ ಹೊಸ ಸಿನಿಮಾ ಮಾಡೋದಾಗಿ ಹೇಳಿದ್ದಾರೆ. ಈ ಹಿಂದೆ ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಸೇರಿದಂತೆ ಹಲವು ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಸತ್ಯಪ್ರಕಾಶ್ ಈ ಬಾರಿ ಹೊಸ ಥರದಲ್ಲಿ ಸಿನಿಮಾ ಮಾಡೋದಾಗಿ ಪ್ಲಾನ್ ರೂಪಿಸಿದ್ದಾರೆ.

ಈಗಾಗಲೇ ಚಿತ್ರದ ಸ್ಕ್ರಿಪ್ಟ್​​ ಕೆಲಸಗಳು ಶುರುವಾಗಿದ್ದು ಈ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಇನ್ನು ಚಿತ್ರದ ಟೈಟಲ್ ಜೊತೆಗೆ ಯಾರೆಲ್ಲ ಇರಲಿದ್ದಾರೆ ಅನ್ನೋದು ಕೂಡ ರಿವೀಲ್ ಆಗಬೇಕಿದೆ. ಪುನೀತ್ ನಿರ್ಮಾಣದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ನಟನೆಯ ‘ಲಾ’ ಸಿನಿಮಾ ಹಾಗೂ ಮಾಯಾಬಜಾರ್ ಸೇರಿದಂತೆ ಹಲವು ಸಿನಿಮಾಗಳು ತೆರೆಕಾಣಬೇಕಿದೆ. ಒಟ್ಟಾರೆಯಾಗಿ ಪಿಆರ್​ಕೆ ಬ್ಯಾನರ್​ನಲ್ಲಿ ಹೊಸಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಜೊತೆಗೆ ಸದಭಿರುಚಿಯ ಚಿತ್ರಗಳನ್ನು ನೀಡ್ತಾಯಿರೋದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv