ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಜಾರಕಿಹೊಳಿ ಬೆಂಬಲಿಗರ ದಾಂಧಲೆ

ಬೆಳಗಾವಿ: ಸಚಿವ ಸ್ಥಾನ ಕೈ ತಪ್ಪಿದಕ್ಕೆ ಆಕ್ರೋಶಗೊಂಡ ಸತೀಶ್ ಜಾರಕಿಹೊಳಿ ಬೆಂಬಲಿಗರು ಇಂದು ಕ್ಲಬ್ ರಸ್ತೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರು ದಾಂಧಲೆ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಸಂಸ್ಥಾಪಕ ಅಧ್ಯಕ್ಷರಾಗಿರುವ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು, ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಅಲ್ಲಿಂದ ಕಾಂಗ್ರೆಸ್ ಕಚೇರಿಗೆ ತೆರಳಿದರು. ಕಾಂಗ್ರೆಸ್ ಕಚೇರಿ ಎದುರು ಇಟ್ಟಿದ್ದ ಹೂವಿನ ಕುಂಡ ಒಡೆದು ಹಾಕಿದ್ರು. ಅಲ್ಲದೆ ರಾಷ್ಟ್ರೀಯ ಹಾಗು ರಾಜ್ಯ ನಾಯಕರಿದ್ದ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಚೇರಿಯ ಒಳಗೆ ಕೂಡ ನುಗ್ಗಲು‌ ಯತ್ನಿಸಿದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv