96ರಿಂದ 46 ಕೆ.ಜಿಗೆ ಇಳಿದ ಸಾರಾ ಅಲಿಖಾನ್, ಫಿಟ್ನೆಸ್​ ಬಗ್ಗೆ ಕೊಡೋ ಟಿಪ್ಸ್​ ಏನು..?

ಸೆಲೆಬ್ರಿಟಿ ಅಂದ್ಮೇಲೆ ಅಂದ, ಚಂದಕ್ಕೆ ಸಂಬಂಧಿಸಿದಂತೆ ನೂರಾರು ಪ್ರಶ್ನೆಗಳು ಬರ್ತವೆ. ಹೈಟು, ವೇಯ್ಟು, ಫ್ಯಾಟು, ಫಿಟ್​​ನೆಸ್​ ಹೀಗೆ..ಎಲ್ಲವೂ ಸರಿಯಾಗಿರಬೇಕು. ಅದ್ರಲ್ಲೂ ಹೀರೋಯಿನ್ ಅಂದ್ಮೇಲೆ ಕೇಳ್ಬೇಕಾ? ಫೆಟ್ನೆಸ್​ ವಿಚಾರದಲ್ಲಂತೂ ರಾಜಿನೇ ಇರಲ್ಲ. ಹೀಗಾಗಿ ಚಿತ್ರರಂಗದ ಬೆಡಗಿಯರು ತಮ್ಮ ಫಿಟ್​ನೆಸ್​ ಬಗ್ಗೆ ತುಂಬಾ ಜಾಗೃತಿ ವಹಿಸ್ತಾರೆ.

ಅಂದ್ಹಾಗೆ ನಾವೀಗ ಹೇಳೋಕೆ ಹೊರಟಿರೋ ಕಥೆ ಬಾಲಿವುಡ್​ ಬ್ಯೂಟಿ, ಸೈಫ್ ಅಲಿ ಖಾನ್ ಮತ್ತು ಅವರ ಮಾಜಿ ಪತ್ನಿ ಅಮೃತಾ ಸಿಂಗ್ ಮಗಳು ಸರಾ ಅಲಿಖಾನ್ ಬಗ್ಗೆ. ಒಂದು ಕಾಲದಲ್ಲಿ ಹೆಚ್ಚು ತೂಕ ಹೊಂದಿದ್ದ ಸಾರಾ, ಇಂದು ಸಖತ್ ಫಿಟ್ ಆಗಿದ್ದಾರೆ. ಸದ್ಯ ಇವ್ರು ತಮ್ಮ ಹಳೇ ಶೈಲಿಯ ಆಹಾರ ಪದ್ಧತಿಯನ್ನ ಬಿಟ್ಟಿದ್ದಾರೆ. ದಿನಾಲೂ ವ್ಯಾಯಾಮ ಮಾಡುತ್ತಾರೆ. ಸಂದರ್ಶನ ಒಂದರಲ್ಲಿ ತಮ್ಮ ಸೌಂದರ್ಯ ಹಾಗೂ ಆರೋಗ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆಷ್ಟೇ 96 ಕೆಜಿ ಇದ್ದ ಇವ್ರು ತಮ್ಮ ತೂಕವನ್ನ ಉಳಿಸಿಕೊಂಡು ಸಖತ್​ ಫಿಟ್​​ ಆಗಿ ಕಾಣುತ್ತಿದ್ದಾರೆ.

ನಿಮ್ ಫಿಟ್​ನೆಸ್​ ಹಾಗೂ ಬ್ಯೂಟಿಯ ರಹಸ್ಯ ಏನು ಅಂತಾ ಕೇಳಿದ್ರೆ, ಅವ್ರು ಕೊಡೋ ಉತ್ತರ ವೆರಿ ಸಿಂಪಲ್.

‘‘ನಾವು ನಮ್ಮ ಸೌಂದರ್ಯಕ್ಕಾಗಿ ದೇಹವನ್ನ ದಿನಾಲು ಕೆಲ ಸಮಯ ದಂಡಿಸಬೇಕಾಗುತ್ತೆ. ಹೀಗಾಗಿ ನಾನು ದಿನಾಲೂ 45 ನಿಮಿಷ ವರ್ಕೌಟ್​ ಮಾಡುತ್ತೇನೆ. ನಾನು ಡಿಗ್ರಿಯಲ್ಲಿದ್ದಾಗ ಬರೋಬ್ಬರಿ 96 ಕೆಜಿ ತೂಕ ಇದ್ದೆ. ನನ್ನ ಭಾರವಾದ ದೇಹ ವೃತ್ತಿ ಜೀವನಕ್ಕೆ ತೊಡಕು ಮಾಡುವಂತಿತ್ತು. ನನ್ನ ತೂಕ ಇಳಿಸುವ ಸಲುವಾಗಿ ಅಮೆರಿಕಾದಲ್ಲಿ ವರ್ಕೌಟ್ ಮಾಡಿದೆ. ಒಳ್ಳೆಯ ಆಹಾರ ಕ್ರಮವನ್ನ ರೂಢಿಸಿಕೊಂಡೆ. ಹಲವು ಕ್ಲಾಸ್​ಗಳಲ್ಲಿ ಭಾಗಿಯಾದೆ. ಜೊತೆಗೆ ಬಾಕ್ಸಿಂಗ್ ಮತ್ತು ಸೈಕ್ಲಿಂಗ್ ಜಾಸ್ತಿ ಮಾಡಿದೆ. ನಂತರ ನನ್ನ ಅತಿಯಾದ ತೂಕ ಕಡಿಮೆ ಆಯಿತು. ಸೋ ನಾನು ನನ್ನ ಆಹಾರ ಶೈಲಿಯನ್ನ ಬದಲಿಸಿಕೊಂಡೆ. ನಿತ್ಯವೂ ತಪ್ಪದೇ ವ್ಯಾಯಾಮ ಮಾಡುವ ಮೂಲಕ ವರ್ಕೌಟ್ ಮಾಡುತ್ತೇನೆ. ಹೆಚ್ಚು ಫ್ಯಾಟ್​​​ ಇರುವ ಆಹಾರಗಳನ್ನ ಯಾವತ್ತೂ ತಿನ್ನಲ್ಲ’’
-ಸರಾ ಅಲಿ ಖಾನ್, ನಟಿ

ಆರೋಗ್ಯ ಅಂತಾ ಬಂದ್ಮೇಲೆ ಕೇವಲ ಸೆಲೆಬ್ರಿಟಿಗೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಆರೋಗ್ಯ ಬೇಕೇಬೇಕು. ಹೀಗಾಗಿ ನಿತ್ಯವೂ ಒಂದಿಷ್ಟು ವ್ಯಾಯಾಮ ಮಾಡಿ, ಯೋಗ ಮಾಡಿ, ಒಳ್ಳೆಯ ಆರೋಗ್ಯ ಕ್ರಮವನ್ನ ರೂಢಿಸಿಕೊಳ್ಳಿ ಅಂತಿದ್ದಾರೆ ಸಾರಾ ಅಲಿ ಖಾನ್.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv