ಬಾಯ್ಸ್​ ಹಾಸ್ಟೆಲ್​ನಲ್ಲಿ ಸೊಳ್ಳೆಗಳದ್ದೇ ‘ಹಾರಾಟ’..!

ಬಳ್ಳಾರಿ: ಹಾಸ್ಟೆಲ್​ನಲ್ಲಿ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿರುವ ದೃಶ್ಯ ನಗರದ ಹೊಸಪೇಟೆಯ ಸಂಕಲಾಪುರದ ಬಾಯ್ಸ್​ ಹಾಸ್ಟೆಲ್​ನಲ್ಲಿ ಕಂಡುಬಂದಿದೆ. ಸೌಕರ್ಯಗಳ ಕೊರತೆ ಒಂದೆಡೆಯಾದ್ರೆ, ಸೊಳ್ಳೆಗಳ ಕಾಟ ಮತ್ತೊಂದು ಕಡೆ.
ಸೊಳ್ಳೆ ಕಡಿತದಿಂದ ಬೇಸತ್ತ ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ತಮ್ಮ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಸೊಳ್ಳೆ ಕಡಿತದಿಂದ ತೀವ್ರ ಜ್ವರ ಆವರಿಸಿ, ಕೆಲ ಪಿಯುಸಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿ ಹಾಸ್ಟೆಲ್​ ತೊರೆಯುವುದು ಅನಿವಾರ್ಯವಾಗಿದೆ. ಆದರೆ ಕೆಲ ವಿದ್ಯಾರ್ಥಿಗಳು ಬೇರೆ ದಾರಿಯಿಲ್ಲದೆ ಆಸ್ಪತ್ರೆಯಿಂದ ಹಾಸ್ಟೆಲ್​ಗೆ ವಾಪಸ್ ಬಂದಿದ್ದಾರೆ. ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಸೇರಿದಂತೆ ಇನ್ನಿತರ ಅವಶ್ಯಕ ಸೌಲಭ್ಯಗಳೇ ಹಾಸ್ಟೆಲ್​ನಲ್ಲಿ ಇಲ್ಲವಾಗಿವೆ ಅಂತಾ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv