‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್’ ಸಿನಿಮಾ ಹಾಫ್ ಸೆಂಚುರಿ ಬಾರಿಸಿ, ಶತದಿನೋತ್ಸವದತ್ತ ನಾಗಾಲೋಟ ಮುಂದುವರೆಸಿದೆ. ‘ಕನ್ನಡಿಗರ ಹೆಮ್ಮೆ’ಯಾಗಿದ್ದ ಸಿನಿಮಾವೀಗ ‘ಗ್ಲೋಬಲ್ ಕೆಜಿಎಫ್’ ಎನಿಸಿಕೊಂಡಿದೆ. ಅಂದ್ಹಾಗೆ ಮೊದಲಿನಿಂದಲೂ ‘ಕೆಜಿಎಫ್’ ಕಥೆಯೊಂದಿಗೆ, ಬಾಲಿವುಡ್ ಸ್ಟಾರ್ ಸಂಜಯ್ ದತ್ ಹೆಸರು ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಅಂತೆ- ಕಂತೆಯಾಗಿಯೇ ಉಳಿದು ಬಿಟ್ಟಿತ್ತು. ಆದ್ರೀಗ ಮೂಲಗಳಿಂದ ಕನ್ಫರ್ಮ್ ಮಾಹಿತಿ ಬಂದಿದೆ. ಅದೇನೆಂದರೆ ‘ಕೆಜಿಎಫ್ ಚಾಪ್ಟರ್- 2’ನಲ್ಲಿ ಸಂಜಯ್ ದತ್ ನಟಿಸಲಿದ್ದಾರೆ.
ಅಧಿಕೃತ ಮಾಹಿತಿಯಷ್ಟೇ ಬಾಕಿ..!
ಕೆಜಿಎಫ್ ಆರಂಭದಿಂದಲೂ ಸಂಜಯ್ ದತ್ ನಟಿಸ್ತಾರೆ ಎಂಬ ಗಾಳಿಸುದ್ದಿಯಿತ್ತು. ಸಿನಿಮಾ ಚಿತ್ರೀಕರಣ ಕಂಪ್ಲೀಟಾಗಿ, ತೆರೆಗೆ ಬಂದರೂ ಇದೊಂದು ಬಿಸಿ ಸುದ್ದಿಯಾಗಿ ಉಳಿದಿತ್ತು. ಆದರೆ ಯಾವ ಪ್ರಶ್ನೆಗಳಿಗೂ ಪಕ್ಕಾ ಮಾಹಿತಿ ಇರಲಿಲ್ಲ. ಇದೀಗ ಚಾಪ್ಟರ್- 2ನಲ್ಲಿ ಸಂಜಯ್ ದತ್ ನಟಿಸೋದು ಕನ್ಫರ್ಮ್ ಆಗಿದೆ. ಸಂಜಯ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಕೆಜಿಎಫ್ ಟೀಂ ಈಗಾಗಲೇ ಎರಡು – ಮೂರು ಬಾರಿ ಸಂಜು ಬಾಬಾರನ್ನು ಭೇಟಿಯಾಗಿದೆ. ಚಾಪ್ಟರ್ – 2 ಕಂಪ್ಲೀಟ್ ಕಥೆಯನ್ನು ಸಂಜುಗೆ ಒಪ್ಪಿಸಿದ್ದಾರೆ. ಕೆಜಿಎಫ್ ಕಥೆಯಿಂದ ಥ್ರಿಲ್ ಆಗಿರುವ ಸಂಜಯ್ ನಟಿಸೋಕೆ ಬಹುತೇಕ ಸಮ್ಮತಿ ನೀಡಿದ್ದಾರೆ. ಮತ್ತೊಂದು ಸುತ್ತಿನ ಮಾತುಕಥೆಯ ನಂತರ ಚಿತ್ರತಂಡ ಅಧಿಕೃತ ಮಾಹಿತಿಯನ್ನು ನೀಡಲಿದೆ. ಉಳಿದಂತೆ ಚಾಪ್ಟರ್- 2 ಸ್ಕ್ರಿಪ್ಟಿಂಗ್ ಬಹುತೇಕ ಮುಗಿದಿದೆ. ಸಂಭಾಷಣೆ ಅಂತಿಮಗೊಳಿಸಲು ಮತ್ತೊಂದು ಸುತ್ತು ಚರ್ಚೆ ನಡೆಯಲಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಮುಂದಿನ ತಿಂಗಳು ಸಿನಿಮಾ ಸೆಟ್ಟೇರಲಿದೆ.
‘ಕೆಜಿಎಫ್ ಚಾಪ್ಟರ್-2’ಗೆ ಎಂಟ್ರಿ ಕೊಟ್ಟ ಸಂಜಯ್ ದತ್..! ಕನ್ಫರ್ಮ್ ಸುದ್ದಿ..!

11 Feb 2019