ವೋಟ್ ಹಾಕೋ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್..!

ಮುಂಬೈ: ಮತದಾರರನ್ನ ಸೆಳೆಯುವುದಕ್ಕೆ ಒಂದೆಡೆ ರಾಜಕೀಯ ಪಕ್ಷಗಳು ನಾನಾ ಕಸರತ್ತು ಮಾಡ್ತಿವೆ. ಮತ್ತೊಂದೆಡೆ ಚುನಾವಣಾ ಆಯೋಗ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕಷ್ಟ ಪಡುತ್ತಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯಬೇಕು ಅನ್ನೋದು ಚುನಾವಣಾ ಆಯೋಗದ ಆಶಯ. ಹೀಗಾಗಿ ಹಲವಾರು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನ ಆಯೋಗ ಹಮ್ಮಿಕೊಳ್ತಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಆಯೋಗ, ಮಹಿಳೆಯರನ್ನ ಮತಗಟ್ಟೆಗಳತ್ತ ಸೆಳೆಯಲು ಮುಂದಾಗಿದೆ. ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಈ ಮೂಲಕ ಜಾಗೃತಿ ಮೂಡಿಸಲು ಪ್ಲ್ಯಾನ್ ಮಾಡಿದೆ.

ಏಪ್ರಿಲ್ 29ರಂದು 4ನೇ ಹಂತದ ಚುನಾವಣೆ ನಡೆಯಲಿದ್ದು, ಇದರಲ್ಲಿ ಮುಂಬೈ ಕೂಡ ಚುನಾವಣೆ ಎದುರಿಸಲಿದೆ. ಸಬರ್ಬನ್ ಮುಂಬೈನ ಸಖಿ ಕೇಂದ್ರಗಳಲ್ಲಿ ಈ ಬಾರಿ ಚುನಾವಣಾ ಆಯೋಗ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ. ಸಖಿ ಬೂತ್​ನಲ್ಲಿ ವೋಟ್ ಮಾಡುವ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್​ಗಳನ್ನ ನೀಡುವುದಕ್ಕೆ ಆಯೋಗ ನಿರ್ಧರಿಸಿದೆ.

ಸಬರ್ಬನ್ ಮುಂಬೈನ ಎಲ್ಲಾ 26 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ಸಖಿ ಮತಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಕುರ್ಲಾ, ಅಂಧೇರಿ, ಬೋರಿವಲಿಯಲ್ಲಿ ಮೂರು ಆಡಳಿತಾತ್ಮಕ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಈ ಎಲ್ಲಾ ಕೇಂದ್ರಗಳಲ್ಲೂ ಮತದಾನಕ್ಕೆ ಬರುವ ಮಹಿಳೆಯರಿಗೆ ಗುಡ್​ವಿಲ್ ಗೆಸ್ಚರ್ ಆಗಿ, ಒಂದೊಂದು ಪ್ಯಾಕ್ ಸ್ಯಾನಿಟರಿ ಪ್ಯಾಡ್​ಗಳನ್ನ ನೀಡಲಾಗುತ್ತೆ ಅಂತ ಚುನಾವಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೆ, ವೋಟ್ ಮಾಡೋಕೆ ಬರುವ ಪುರುಷ ಹಾಗೂ ಮಹಿಳಾ ಮತದಾರರಿಗೆ ಕೂಲ್ ಡ್ರಿಂಕ್ಸ್ ವ್ಯವಸ್ಥೆ ಕೂಡ ಮಾಡಲಾಗುತ್ತದೆಯಂತೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv