ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಮರಗಳ್ಳರು

ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಜೋಗಿಮಟ್ಟಿ ವನ್ಯಜೀವಿ ಅರಣ್ಯವಲಯದಲ್ಲಿ ಗಂಧದ ಮರಗಳ್ಳರನ್ನು ಬಂಧಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚು ಬೀಸಿದ ಘಟನೆ ನಡೆದಿದೆ. ಮರಗಳ್ಳರ ಬಂಧನಕ್ಕೆ ಮುಂದಾದ ವೇಳೆ ಓರ್ವ ಸೆರೆ ಸಿಕ್ಕಿದ್ದು, ಇನ್ನುಳಿದ 4 ಜನ ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿ ಆರ್ಮುಗಂ ಶಿವಮೊಗ್ಗ ಮೂಲದವನಾಗಿದ್ದು, ಇತರೆ ಆರೋಪಿಗಳ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾಚರಣೆ ನಡೆಸಿ ಸುಮಾರು 12 ಕೆಜಿ ಮೌಲ್ಯದ ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಗಂಧದ ಮರದ ಮೌಲ್ಯ ಅಂದಾಜು ₹ 1 ಲಕ್ಷ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆರ್​​ಎಫ್​​ಒ ಸಂದೀಪ್ ನಾಯಕ ಹಾಗೂ ಎಆರ್​ಎಫ್​ಒ ಪ್ರದೀಪ್ ಕೇಸರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಅಂತಾ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv