ಚಿನ್ನದ ಗಣಿ ಪ್ರದೇಶದಲ್ಲಿ ಗಂಧದ ಮರ ಕಳವು..!

ರಾಯಚೂರು: ಅಧಿಸೂಚಿತ ಪ್ರದೇಶದಲ್ಲಿದ್ದ ₹ 2 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಶ್ರೀಗಂಧದ ಮರ ಕಳವಾದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ನಡೆದಿದೆ. ಚಿನ್ನದ ಗಣಿ ಘಟಕದ ಅಧಿಕಾರಿಯ ಮನೆ ಹಿಂಭಾಗದಲ್ಲಿದ್ದ ಗಂಧದ ಮರ ಇದಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕುಕೃತ್ಯವೆಸಗಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಗಂಧದ ಮರಗಳು ಕಳ್ಳತನವಾಗಿದ್ದವು. ತಡರಾತ್ರಿ ಗಂಧದ ಮರಕ್ಕೆ ಕತ್ತರಿ‌ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಲಿಂಗಸುಗೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.