ಚಾಲೆಂಜಿಂಗ್ ಸ್ಟಾರ್​​ ದರ್ಶನ್​ಗೆ ಮ್ಯಾನೇಜರ್​​ನಿಂದ ₹10 ಕೋಟಿ ವಂಚನೆ..?!

ಬೆಂಗಳೂರು: ಸ್ಯಾಂಡಲ್​ವುಡ್​ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹೆಸರಲ್ಲಿ ₹10 ಕೋಟಿ ಸಾಲ ತೆಗೆದುಕೊಂಡಿರುವ ದರ್ಶನ್ ಅವರ ಮ್ಯಾನೇಜರ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಊರಿಗೆ ಹೋಗಿ ಬರೋದಾಗಿ ಹೇಳಿ, ಮ್ಯಾನೇಜರ್​ ಮಲ್ಲಿಕಾರ್ಜುನ್ ನಾಪತ್ತೆಯಾದ್ದು, 10 ದಿನಗಳು ಕಳೆದರೂ ದರ್ಶನ್ ಸಂಪರ್ಕಕ್ಕೆ ಸಿಗುತ್ತಿಲ್ಲ.

ದರ್ಶನ್​ ಅವರ ಮ್ಯಾನೇಜರ್ ಮಲ್ಲಿಕಾರ್ಜುನ್ ನಂಬಿಕಸ್ಥನಾಗಿದ್ದು, ದರ್ಶನ್‌ಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ಈತನೇ ನೋಡಿಕೊಳ್ತಿದ್ದ. ಆದರೆ, ದರ್ಶನ್ ಹೆಸರು ದುರುಪಯೋಗ ಪಡಿಸಿಕೊಂಡಿರುವ ಈತ ದರ್ಶನ್ ಹೆಸರು ಹೇಳಿಕೊಂಡು ಸಾಲ ಮಾಡಿದ್ದ ಎನ್ನಲಾಗಿದೆ. ಇದೀಗ ದರ್ಶನ್‌ಗೆ ಮೋಸ ಮಾಡಿ, 10 ಕೋಟಿ ಪಂಗನಾಮ ಹಾಕಿರುವ ಮಲ್ಲಿಕಾರ್ಜುನ್ ಎಸ್ಕೇಪ್ ಆಗಿದ್ದಾನೆ ಎನ್ನಲಾಗ್ತಿದೆ. ಆದ್ರೆ, ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv