ಶ್ರೀಗಂಧ ಕಳ್ಳಸಾಗಣೆ: ಅಪ್ಪ-ಮಗನ ಅರೆಸ್ಟ್

ತುಮಕೂರು: ಬೆಂಗಳೂರಿನಿಂದ ಆಂಧ್ರ ಕಡೆಗೆ ಶ್ರೀಗಂಧವನ್ನು ಸಾಗಿಸುತ್ತಿದ್ದ ತಂದೆ ಮತ್ತು ಮಗನನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹೊಸಕೋಟೆಯ ಸಯ್ಯದ್​ ಬಾಬ(ತಂದೆ), ಸಯ್ಯದ್​ ರಿಯಾಜ್​(ಮಗ) ಎಂದು ಹೇಳಲಾಗಿದೆ. ಐ10 ವೈಟ್​ ಕಾರಿನಲ್ಲಿ ತಂದೆ ಮಗ ಇಬ್ಬರು ನಾಲ್ಕೈದು ಮೂಟೆಗಳಲ್ಲಿ ಶ್ರೀಗಂಧವನ್ನು ತುಂಬಿ ಸಾಗಿಸುತ್ತಿದ್ದರು. ಕಳ್ಳಂಬೆಳ್ಳ ಪೊಲೀಸರು ತಪಾಸಣೆ ನಡೆಸಿದ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 75ರಿಂದ 80 ಕೆಜಿ ಶ್ರೀಗಂಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳ್ಳಂಬೆಳ್ಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.