ಕೊಪ್ಪಳದಲ್ಲಿ ಸಂಚಾರಿ ಸಸ್ಯ ಸಂತೆ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ: ವಿಶ್ವ ಪರಿಸರ ಸಪ್ತಾಹ ಮತ್ತು ಪ್ಲಾಸ್ಟಿಕ್ ಮಾಲಿನ್ಯ ತಡೆ ಅಭಿಯಾನದ ಅಂಗವಾಗಿ ಇಂದು ಬೆಳಗ್ಗೆ ಸಂಚಾರಿ ಸಸ್ಯ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬನ್ನಿಕಟ್ಟಿಯ ಗೌರಿಶಂಕರ ದೇವಸ್ಥಾನದಿಂದ ಸಂಚಾರಿ ಸಸ್ಯ ಸಂತೆಗೆ ಚಾಲನೆ ಸಿಕ್ಕಿತು. ಅಭಿಯಾನದಲ್ಲಿ ನೇರಳೆ, ಪೇರಲ, ಕಾಡು ಬದಾಮ, ಕರಿಬೇವು, ನಿಂಬೆ, ಸಿಲ್ವರ್ ವೋಕ್ ಹಾಗೂ ಇತರೆ ಜಾತಿಗಳ ಸಸಿಗಳನ್ನು ಹೊತ್ತು ಸಂಚಾರಿ ವಾಹನದ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಸಸಿ ವಿತರಿಸಲಾಯಿತು.
ಈ ಅಭಿಯಾನ ಕೊಪ್ಪಳ ನಗರದ ವಿವಿಧ ವೃತ್ತ ಮತ್ತು ಬಡಾವಣೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಒಂದು ಸಸಿಗೆ ಮೂರು ರೂಪಾಯಿಯಂತೆ ಸಸಿಗಳನ್ನು ವಿತರಿಸಲಾಯಿತು. ಸಾರ್ವಜನಿಕರು ಈ ಅಭಿಯಾನಕ್ಕೆ ಸಾಥ್ ನೀಡುವ ಜೊತೆಗೆ ಸಾಲಾಗಿ ನಿಂತು ಸಸಿಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv