ಪಾಕ್​ ಉಗ್ರರಿಂದ ಸಮುದ್ರದಲ್ಲಿ ಜಿಹಾದ್, ನೌಕಾಪಡೆ ಹೈ ಅಲರ್ಟ್..!

ದೆಹಲಿ, ಮುಂಬೈ: ಸಮುದ್ರ ಮಾರ್ಗದಲ್ಲಿ ಜಿಹಾದಿ ಸುಳಿಗಳು ಏಳುವ ಸಾಧ್ಯತೆಯಿದ್ದು ನೌಕಾಪಡೆ, ಕೋಸ್ಟ್​ ಗಾರ್ಡ್​ಗೆ ಹೈ ಅಲರ್ಟ್​ನಿಂದ ಇರುವಂತೆ ಸೂಚಿಸಲಾಗಿದೆ. ಈ ಹಿಂದೆ ಮುಂಬೈ ದಾಳಿ ವೇಳೆ ಪಾಕ್​ ತೀರದಿಂದ ಬಂದು ದಾಳಿ ನಡೆಸಿದ್ದಂತೆ, ಪಾಕಿಸ್ತಾನದ ನೆಲೆಯಿಂದ ಹೊರಬಂದಿರುವ ಲಷ್ಕರ್​ ಎ ತೊಯ್ಬಾ (LeT) ಉಗ್ರರು ಭಾರತದ ಬಂದರುಗಳು, ಸರಕು ಸಾಗಣೆ ಶಿಪ್​​ಗಳು, ಆಯಿಲ್​ ಟ್ಯಾಂಕರ್​​​ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಪಾಕ್​ ತೀರದ ದಾಹ:
ಈ ಕುರಿತು, ಗುಪ್ತಚರ ಸಂಸ್ಥೆಯು ಮಾಹಿತಿ ಒದಗಿಸಿದ್ದು ಸಮುದ್ರದ ಮೂಲಕ ಭಾರತದ ಮೇಲೆ ದಾಳಿ ಮಾಡಲು (LeT) ಕೆಲವು ತಿಂಗಳುಗಳಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಶೇಖರಿಸಿಡುತ್ತಿದೆ ಎಂದು ತಿಳಿಸಿದೆ. ಜೈಷ್​ ಎ ಮೊಹಮದ್​ (JeM) ಸಹ ಲಷ್ಕರೆ ತೊಯ್ಬಾ ಜೊತೆ ಕೈ ಜೋಡಿಸಿದ್ದು ಭಾರೀ ಈಜುಗಾರರು ಮತ್ತು ಸಮುದ್ರದಾಳದ ಡೈವರ್​ಗಳನ್ನು ಸಜ್ಜುಗೊಳಿಸುತ್ತಿದೆ. ‘ಸಮುಂದರಿ ಜಿಹಾದ್​’ ಹೆಸರಿನಲ್ಲಿ ಭವಾಲ್ಪುರದಲ್ಲಿ ಇವರಿಗೆಲ್ಲ ತರಬೇತಿ ನೀಡಲಾಗುತ್ತಿದೆ. ಪಾಕಿಸ್ತಾನದ ನೌಕಾಪಡೆ ಇವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ತಿಳಿದುಬಂದಿದೆ.