ಸಾಟಿ ಇಲ್ಲದ ಸಲ್ಲು ಫಿಟ್ನೆಸ್.. ಭಾಯಿಜಾನ್ ವರ್ಕೌಟ್​ ಹೇಗಿರುತ್ತೆ ಗೊತ್ತಾ..?

53 ವರ್ಷವಾದ್ರೂ ಸಲ್ಮಾನ್ ಖಾನ್ ಚಾರ್ಮ್ ಮಾತ್ರ ಕಮ್ಮಿ ಆಗಿಲ್ಲ. ಇತ್ತೀಚಿಗಷ್ಟೇ ಸಲ್ಮಾನ್ ಡಿಸೆಂಬರ್‌ 27 ರಂದು ತಮ್ಮ  53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತೆರೆ ಮೇಲೆ ಸಲ್ಮಾನ್ ಫಿಟ್ನೆಸ್ ನೋಡಿ ಕೋಟ್ಯಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ರಿಯಲ್‌ ಲೈಫ್‌ನಲ್ಲೂ ಸಲ್ಲು ಫಿಟ್ನೆಸ್ ಹೇಗಿರಲಿದೆ ಎಂಬುದು ಎಲ್ಲರಲ್ಲೂ ಎಕ್ಸೈಟ್‌ಮೆಂಟ್‌ ಇದ್ದೆ ಇರುತ್ತೆ. 53ರ ವಯಸ್ಸಿನಲ್ಲೂ ಸಲ್ಲು ಭಾಯ್ ದೈಹಿಕ ಸಾಮರ್ಥ್ಯ, ಫಿಟ್ನೆಸ್ ಇತರರಿಗೂ ಸ್ಫೂರ್ತಿ.

ಸಲ್ಮಾನ್‌ ಫಿಟ್‌ನೆಸ್‌ಗಾಗಿ ಸಾಕಷ್ಟು ಕಸರತ್ತು ಮಾಡುತ್ತಾರೆ. ಸಲ್ಲುಗೆ ಸಿನಿಮಾ ಎಷ್ಟು ಮುಖ್ಯಾನೋ ಅಷ್ಟೇ ಫಿಟ್ನೆಸ್‌ ಕೂಡಾ ಅಷ್ಟೇ ಇಂಪಾರ್ಟೆಂಟ್. ಸಲ್ಮಾನ್ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುವುದು, ಕಡಿಮೆ ಮಾಡಿಕೊಳ್ಳುವುದು ಮಾಮೂಲಿ. ಆದ್ರೆ ಸಲ್ಮಾನ್ ಪ್ರತಿನಿತ್ಯ ವರ್ಕೌಟ್‌ ತುಂಬಾ ಶಿಸ್ತಿನಿಂದ ಮಾಡುತ್ತಾರೆ.

53 ವಯಸ್ಸಿನಲ್ಲೂ ಆಕರ್ಷಕ ದೇಹದ ಹಿಂದೆ ಸಲ್ಮಾನ್‌ ಖಾನ್‌ ಶ್ರಮ ಬಹಳಷ್ಟಿದೆ. ಸಲ್ಲು ಪ್ರತಿನಿತ್ಯ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ಜಿಮ್‌ ಅಂದ್ರೆ ಅವರಿಗೆ ಪಂಚಪ್ರಾಣ. ಏನಿಲ್ಲ ಅಂದ್ರೂ ದಿನಕ್ಕೆ 1 ರಿಂದ 2 ಗಂಟೆಗಳ ಕಾಲ ಸಲ್ಮಾನ್ ಖಾನ್ ಜಿಮ್‌ನಲ್ಲಿ ಕಳೆಯುತ್ತಾರೆ. ತೂಕ ಇಳಿಕೆಗೆ ಸಂಬಂಧಪಟ್ಟ ವ್ಯಾಯಾಮಗಳನ್ನು ಮಾಡುತ್ತಾರೆ. ಸಲ್ಲುಗೆ ಸೈಕಲ್ ಓಡಿಸುವುದು ಅಂದ್ರೆ ತುಂಬಾ ಇಷ್ಟ. ಫ್ರೀಡೇಸ್‌ನಲ್ಲಿ ಸಲ್ಮಾನ್‌ ಸೈಕಲ್ ರೈಡಿಂಗ್ ಮಾಡ್ತಾರಂತೆ. ಇದ್ರಿಂದ ಹೃದಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಮರ್ಪಣೆ  ಮನೋಭಾವ, ಸಂಕಲ್ಪ, ಶಿಸ್ತು ಕ್ರಮ ಇದ್ದರೆ ಮಾತ್ರ ಸುಂದರ ಮೈಕಟ್ಟು ಹಾಗೂ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯ ಎಂಬುದು ಸಲ್ಮಾನ್ ಅಭಿಪ್ರಾಯ.

ಡಯಟ್‌ ವಿಷಯದಲ್ಲೂ ಸಲ್ಲು ಎತ್ತಿದ ಕೈ. ಆಹಾರ ಕ್ರಮದ ಬಗ್ಗೆ ಸಲ್ಮಾನ್ ಜಾಗರೂಕತೆ ವಹಿಸುತ್ತಾರೆ. ಪ್ರೋಟಿನ್ ಹೆಚ್ಚಾಗಿರುವ ಆಹಾರವನ್ನು ಸಲ್ಮಾನ್ ಸ್ವೀಕರಿಸುತ್ತಾರೆ. ದೇಶಿ ಆಹಾರಕ್ರಮ ಇಷ್ಟ ಪಡುವ ಅವರು, ಇಟಾಲಿಯನ್ ಫುಡ್ ಅಂದ್ರೆ ಕೂಡಾ ಇಷ್ಟವಂತೆ. ಮಾಂಸಹಾರದ ಬಗ್ಗೆ ಸಲ್ಲುಗೆ ವಿಶೇಷ ಒಲವು. ಮೊಟ್ಟೆಯ ಬಿಳಿ ಭಾಗ. ಕೊಬ್ಬಿನಾಂಶ ಕಡಿಮೆ ಇರುವ ಹಾಲು, ಮಧ್ಯಾಹ್ನ ಲಂಚ್‌ಗೆ ಐದು ಚಪಾತಿ. ಬೇಯಿಸಿದ ತರಕಾರಿ, ಹಾಗೂ ಸಲಾಡ್ ಸೇವಿಸುತ್ತಾರೆ. ರಾತ್ರಿ ಡಿನ್ನರ್‌ಗೆ ಎರಡು ಮೊಟ್ಟೆಯ ಬಿಳಿ ಭಾಗ, ಫಿಶ್, ಚಿಕನ್ ಹಾಗೂ ಸೂಪ್‌ ಸಲ್ಮಾನ್ ಡಯಟ್​ ಲಿಸ್ಟ್‌ನಲ್ಲಿರುತ್ತವೆ.

View this post on Instagram

This is how I am preparing for Bigg Boss season 12 #BB12

A post shared by Salman Khan (@beingsalmankhan) on

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv