ಕತ್ರಿನಾ ನನ್ನನ್ನು ಭಾಯಿಜಾನ್ ಎನ್ನಬಾರದು, ಆದ್ರೆ ಹೀಗಂತಾ ಕರೆದ್ರೆ ಓಕೆ..!-ಸಲ್ಲು

ನವದೆಹಲಿ: ದಬಾಂಗ್​ ಸ್ಟಾರ್​, ಬಾಲಿವುಡ್ ಟೈಗರ್, ಭಾಯಿಜಾನ್​, ಬಾಲಿವುಡ್​ ಬ್ಯಾಡ್​ ಬಾಯ್​ ಹೀಗೆ ನಟ ಸಲ್ಮಾನ್​ ಖಾನ್​ಗೆ ಫ್ಯಾನ್ಸ್​ ಪ್ರೀತಿಯಿಂದ ಕರೆಯೋ ಹೆಸರಿಗೇನೂ ಕೊರತೆಯಿಲ್ಲ. 57ನೇ ವಯಸ್ಸಲ್ಲೂ 27ರ ತರುಣರು ನಾಚುವಂತೆ ನಟಿಸೋ ಸಲ್ಲುಮಿಯಾರ, ಸೆನ್ಸ್​ ಆಫ್​ ಹ್ಯೂಮರ್​ ಕೂಡ ಸಖತ್​ ಇರುತ್ತೆ. ನಿನ್ನೆ ನಡೆದಿದ್ದೂ ಕೂಡ ಅದೇ.
ಸದ್ಯ ತಾವು ಮತ್ತು ಕತ್ರಿನಾ ಕೈಫ್ ನಟಿಸಿರುವ ಭಾರತ್​ ಸಿನಿಮಾದ ಪ್ರಮೋಷನ್​ನಲ್ಲಿ ಬಾಲಿವುಡ್​ ‘ಬಿಗ್​ಬಾಸ್​’ ಬ್ಯುಸಿಯಾಗಿದ್ದಾರೆ. ನಿನ್ನೆ ಭಾರತ್ ಸಿನಿಮಾದ ನಾಲ್ಕನೇ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ನಟಿ ಕತ್ರಿನಾಗೆ ಪ್ರಶ್ನೆ ಕೇಳಲು ಆರಂಭಿಸುತ್ತಾರೆ. ‘ಭಾರತ್​ ಸಿನಿಮಾದಲ್ಲಿ ‘ಭಾಯಿಜಾನ್’ (ಸಲ್ಮಾನ್ ಖಾನ್) ಬಗ್ಗೆ..’ ಹೀಗಂತಾ ಪ್ರಶ್ನೆ ಕೇಳಲು ಮುಂದಾಗ್ತಾರೆ. ರಿಪೋರ್ಟರ್​ ಪ್ರಶ್ನೆ ಮುಗಿಸುವಷ್ಟರಲ್ಲೇ ಮಧ್ಯಪ್ರವೇಶಿಸಿದ ಸಲ್ಮಾನ್ ಖಾನ್, ನಾನು ಕತ್ರಿನಾಗೆ ಭಾಯಿಜಾನ್​ ಅಲ್ಲ ಅಂದ್ರು. ಅಲ್ಲದೇ ನಾನು ಅವರಿಗೆ ಭಾಯಿಜಾನ್ ಅಲ್ಲ, ‘ಮೇರಿ ಜಾನ್’ ಎಂದು ಹೇಳಿ ನೆರೆದಿದ್ದವರನ್ನು ಒಮ್ಮೆ ನಗೆಗಡಲಲ್ಲಿ ತೇಲಿಸಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv