ಜಾಕ್ವೆಲಿನ್ ಬಗ್ಗೆ ಸಲ್ಲು ಮಿಯಾ ಫುಲ್ ಇಂಪ್ರೆಸ್​​..!

ಬಾಲಿವುಡ್ ಬ್ಯಾಡ್ ಬಾಯ್ ಸಲ್ಲು ಮಿಯಾ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ಹೊಗಳಿಕೆಯ ಹೊಳೆಯನ್ನೇ ಹರಿಸಿದ್ದಾರೆ. ಆಕೆಯೊಂದಿಗೆ ನನಗೆ ಕೆಲಸ ಮಾಡಲು ಯಾವಾಗಲೂ ಫನ್, ಆಕೆ ಪ್ರತಿಭಾವಂತೆ. ಅಲ್ಲದೇ, ಆಕೆ ವೆರಿ ಡೌನ್ ಟು ಅರ್ಥ್ ಅಂತ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೆಳಿದ್ದಾರೆ. ರೇಸ್​​​ 3 ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಲ್ಲು ಭಾಯ್, ಲಂಡನ್ ಡ್ರೀಮ್ಸ್ ಚಿತ್ರಕ್ಕೂ ಮೊದಲ ಆಯ್ಕೆ ಜಾಕ್ವೆಲಿನ್ ಅವರೇ ಆಗಿದ್ರು. ಆದ್ರೆ, ಕಾರಣಾಂತರಗಳಿಂದ ಅವರು ಅದರಲ್ಲಿ ಆ್ಯಕ್ಟ್ ಮಾಡಲಿಲ್ಲ. ಬಳಿಕ ಕಿಕ್ ಚಿತ್ರದಲ್ಲಿ ಆಕೆ ನನ್ನ ಜೊತೆ ನಟಿಸಿದ್ರು. ಈಗ ರೆಮೊ ಡಿಸೋಜಾ ನಿರ್ದೇಶನದ ರೇಸ್​ 3ಯಲ್ಲೂ ಆಕೆ ಅದ್ಭುತವಾಗಿ ನಟಿಸಿದ್ದಾರೆ ಅಂತಾ ಸುಲ್ಲು ಮಿಯಾ ಹೇಳಿದ್ದಾರೆ. ಒಟ್ಟಿನಲ್ಲಿ, ಸಲ್ಲು ಭಾಯ್ ಕಣ್ಮಣಿಯಾಗಿರೋ ಜಾಕ್ವೆಲಿನ್ ಭಾಗ್ಯದ ಬಾಗಿಲು ಮತ್ತಷ್ಟು ತೆರೆಯುತ್ತೋ ಅಥವಾ ವಿವಾದ ಕೂಪಕ್ಕೆ ಆಕೆ ಬೀಳ್ತಾಳೋ ಕಾಲವೇ ಹೇಳಲಿದೆ.