ಕೈ-ಜೆಡಿಎಸ್ ಸರ್ಕಾರ ಹಣ್ಣಾಗಿದೆ, ಅದಕ್ಕೆ ನಿಫಾ ಸೋಂಕು ಅಂಟಿದೆ! ಡಿವಿಎಸ್​

ಹಾಸನ: ಕೇಂದ್ರ ಸರ್ಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಸಂದೇಶವನ್ನು ರಾಜ್ಯದೆಲ್ಲೆಡೆ ಪಕ್ಷದ ಮುಖಂಡರು ಸಾರುತ್ತಿದ್ದಾರೆ. ಇದರ ಭಾಗವಾಗಿ ಕೇಂದ್ರ ಸಚಿವ ಸದಾನಂದಗೌಡ ಅವರು ಇವತ್ತು ಹಾಸನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಈಗಾಗಲೇ ಹಣ್ಣಾಗಿದೆ. ಹಣ್ಣಿಗೆ ನಿಫಾ ಸೋಂಕು ಅಂಟಿದೆ, ಹೀಗಾಗಿ ಈ ಹಣ್ಣು ಯಾವಾಗ ಬೇಕಾದ್ರೂ ಬೀಳಬಹುದು ಅಂತಾ ವ್ಯಂಗ್ಯಮಾಡಿದ್ರು. ವಿದೇಶದಿಂದ ಕಪ್ಪು ಹಣ ತರುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಪೇಜಾವರ ಶ್ರೀಗಳೂ ಸಹ ಸಲಹೆ ನೀಡಿದ್ದಾರೆ ಜೊತೆಗೆ ಗಂಗಾ ನೈರ್ಮಲ್ಯೀಕರಣಕ್ಕೆ ಒತ್ತು ನೀಡಿ ಎಂದಿದ್ದಾರೆ ಹೊರತು ಅವರು ಕೇಂದ್ರ ಸರ್ಕಾರವನ್ನು ಟೀಕಿಸಿಲ್ಲ ಎಂದು ಸದಾನಂದಗೌಡ ಅವರು ಸಮರ್ಥನೆ ಮಾಡಿಕೊಂಡರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅಲ್ಲಿವರೆಗೂ ಸರ್ಕಾರ ಉಳಿದರೆ ತಾನೇ ಆ ಪ್ರಶ್ನೆ ಬರೋದು ಎಂದು ವ್ಯಂಗ್ಯವಾಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv