18 ವರ್ಷ, 319 ಏಕದಿನ, 66 ಟೆಸ್ಟ್​, ಬಣ್ಣ ಬಳಿದ ಮೈ ತಂದಿತು ಗ್ಲೋಬಲ್ ಸ್ಪೋರ್ಟ್ಸ್ ಫ್ಯಾನ್ ಗೌರವ..!

 

ಈತ 18 ವರ್ಷಗಳ ಕಾಲ ಕೆಲಸ, ಕಾರ್ಯ ಬಿಟ್ಟು ಬರೀ ಸುತ್ತಾಡುತ್ತಿದ್ದ. ಕುಟುಂಬವನ್ನ ಲೆಕ್ಕಿಸದ ಈತ, ಮೈತುಂಬ ಬಣ್ಣ ಹಚ್ಚಿಕೊಂಡು ದೇಶ ವಿದೇಶಗಳ ಪರ್ಯಟನೆ ನಡೆಸುತ್ತಿದ್ದ. ಎಷ್ಟೇ ಕಷ್ಟ ಆದ್ರೂ ಈತ ತನ್ನ ಆಸೆಯನ್ನು ಈಡೇಸಿಕೊಳ್ಳುತ್ತಿದ್ದ. ನಾವ್ ಮಾತನಾಡ್ತಿರೋದು ಕ್ರಿಕೆಟ್ ದಂಥಕತೆ ಸಚಿನ್ ತೆಂಡುಲ್ಕರ್ ಅವರ ಡೈ ಹಾರ್ಡ್ ಫ್ಯಾನ್, ಸುಧೀರ್ ಕುಮಾರ್ ಗೌತಮ್ ಬಗ್ಗೇನೆ. ಈತನ ಬಗ್ಗೆ ಎಷ್ಟು ಹೇಳಿದ್ರೂ ಸಾಲದು. ಯಾಕಂದ್ರೆ ಈತನಿಗೆ ಕ್ರಿಕೆಟ್ ಮೇಲೆ ಇರೋ ಪ್ರೀತಿ ಅಷ್ಟಿಷ್ಟಲ್ಲ..! ಸುಮಾರು 18 ವರ್ಷಗಳಿಂದ ಈತ ಮನೆ ಮಠ ಬಿಟ್ಟು, ಕ್ರಿಕೆಟ್ ಫೀಲ್ಡ್ ನಲ್ಲೇ ಕಾಲ ಕಳೆಯುತ್ತಿದ್ದಾನೆ. ಇದುವರೆಗೂ ಸುಧೀರ್ 319 ಏಕದಿನ, 66 ಟೆಸ್ಟ್, 73 ಟಿ-ಟ್ವೆಂಟಿ ಮತ್ತು 3 ರಣಜಿ ಟ್ರೋಫಿ ಪಂದ್ಯಗಳನ್ನ ಸ್ಡೇಡಿಯಮ್ ನಲ್ಲಿ ವೀಕ್ಷಿಸಿದ್ದಾನೆ. ಸುಧೀರ್ ರ ಈ ಅಭಿಮಾನಕ್ಕೆ, ಯು.ಕೆ ಮೂಲದ ಇಂಡಿಯನ್ ಸ್ಪೋರ್ಟ್ಸ್ ಫ್ಯಾನ್ ರೆಪ್ರಸಂಟೇಟಿವ್, ಗ್ಲೋಬಲ್ ಸ್ಪೋರ್ಟ್ಸ್ ಫ್ಯಾನ್ ಪ್ರಶಸ್ತಿ ನೀಡಿ ಗೌರವಿಸಲು ಮುಂದಾಗಿದೆ. 2019ರ ವಿಶ್ವಕಪ್ ವೇಳೆ ಮ್ಯಾಂಚೆಸ್ಟರ್ ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ, ಸುಧೀರ್ ಗೆ ಪ್ರಶಸ್ತಿ ನೀಡಲಾಗುತ್ತದೆ. ಮತ್ತೊಂದೆಡೆ ಗ್ಲೋಬಲ್ ಸ್ಪೋರ್ಟ್ಸ್ ಫ್ಯಾನ್ ಪ್ರಶಸ್ತಿ ಬಗ್ಗೆ ಮಾತನಾಡಿರೋ ಸುಧೀರ್, ಈ ಪ್ರಶಸ್ತಿಯನ್ನ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ ಅವರಿಗೆ ಅರ್ಪಿಸೋದಾಗಿ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv