ಟ್ವಿಟರ್​ನಲ್ಲಿ ಹಳೆಯ ಫ್ರೆಂಡ್​ ಕಾಲೆಳೆದ ಮಾಸ್ಟರ್​ ಬ್ಲಾಸ್ಟರ್​

ಜಗತ್ತಿನಲ್ಲಿ ಅದೆಷ್ಟೋ ಜನ ಆತ್ಮೀಯ ಸ್ನೇಹಿತರಿದ್ದಾರೆ. ಅದರಲ್ಲಿ ಕೆಲವರ ಸ್ನೇಹದ ಬಗ್ಗೆ ಉದಹಾರಣೆ ಕೂಡ ಕೊಡ್ತಿರ್ತಾರೆ. ಅಂಥ ಬೆಸ್ಟ್ ಫ್ರೆಂಡ್ಸ್​​ ಲಿಸ್ಟ್​​ನಲ್ಲಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್ ಹಾಗೂ ವಿನೋದ್​ ಕಾಂಬ್ಳಿ ಕೂಡ ಇದ್ದಾರೆ. ಏಪ್ರಿಲ್ 24ರಂದು ಸಚಿನ್ ತಂಡೂಲ್ಕರ್ ತಮ್ಮ 46ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು. ಈ ವೇಳೆ ಇಡೀ ಜಗತ್ತೇ ಅವರಿಗೆ ಬರ್ತ್​ಡೇ ವಿಶ್ ಮಾಡಿತು. ಇನ್ನು, ಅವರ ಹಳೆಯ ಸ್ನೇಹಿತ, ಆಪ್ತ ಮಿತ್ರ ವಿನೋದ್ ಕಾಂಬ್ಳೆ ವಿಶ್ ಮಾಡದೇ ಇರೋಕೆ ಆಗುತ್ತಾ? ಕಾಂಬ್ಳಿ ಕೂಡ ಟ್ವಿಟರ್​ನಲ್ಲಿ ವಿಶ್ ಮಾಡಿದ್ರು.

“ಯಾದ್ ಕರೇಗಿ ದುನಿಯಾ ತೇರಾ ಅಫ್ಸಾನಾ” ಅಂತ ಹಳೆಯ ಹಿಂದಿ ಹಾಡುಗಳನ್ನ ತಾವೇ ಹಾಡುವ ಮೂಲಕ ಸಚಿನ್​ಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಸಚಿನ್ ಹಾಗೂ ಕಾಂಬ್ಳಿ ಒಟ್ಟಿಗೆ ಇದ್ದ ಕೆಲವು ಹಳೆಯ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಇದನ್ನ ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು, ಕಾಂಬ್ಳಿಯ ಗಾಯನವನ್ನ ಮೆಚ್ಚಿದ್ದಾರೆ. ಎಲ್ಲಕ್ಕಿಂತ ಬೆಸ್ಟ್ ರಿಪ್ಲೈ ಕ್ರಿಕೆಟ್ ದೇವರದ್ದೇ. ತಮ್ಮ ಗೆಳೆಯ ಶುಭಾಶಯ ಕೋರಿದ್ದಕ್ಕೆ ಟ್ವಿಟರ್​ನಲ್ಲೇ ಧನ್ಯವಾದಗಳನ್ನ ಹೇಳಿರುವ ಸಚಿನ್, ಕಾಂಬ್ಳಿಯ ಕಾಲು ಕೂಡ ಎಳೆದಿದ್ದಾರೆ. ನೀವು ಹಾಡಿರುವ ಹಾಡು ಸಖತ್ ಆಗಿದೆ. ಆದ್ರೆ, ನನಗೆ ಒಂದು ಆಶ್ಚರ್ಯ ಆಗ್ತಿರುವ ವಿಚಾರ ಅಂದ್ರೆ, ನಿಮ್ಮ ಗಡ್ಡ ಬೆಳ್ಳಗಾದ್ರೂ, ಅದ್ಹೇಗೆ ಈಗಲೂ ಕಣ್ಣಿನ ಹುಬ್ಬುಗಳು ಮಾತ್ರ ಕಪ್ಪಗಿವೆ ಅಂತ ಸಚಿನ್, ಕಾಂಬ್ಳೆಯ ಕಾಲೆಳೆದಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv