ತಿಂಗಳ್ಯಾಕೆ ಕುಮಾರಸ್ವಾಮಿ ಹೇಳಿದ್ರೆ.. ಇಂದೇ ರಾಜೀನಾಮೆ: ಸಾ.ರಾ.ಮಹೇಶ್

ಮಂಡ್ಯ: ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ ಅವರು ಇನ್ನು ಒಂದು ತಿಂಗಳಲ್ಲಿ ಜೆಡಿಎಸ್​ ಸಚಿವರೊಬ್ಬರನ್ನು ತೆಗೆದು ಹಾಕಲಾಗುತ್ತದೆ, ಆ ಸ್ಥಾನ ನನಗೆ ಸಿಗಲಿದೆ ಅಂತ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಸಾ.ರಾ.ಮಹೇಶ್​  ಒಂದು ತಿಂಗಳ್ಯಾಕೆ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ರೆ ಈಗಲೇ ನಾನು ರಾಜೀನಾಮೆ ಕೊಡಲು ಸಿದ್ಧ ಎಂದಿದ್ದಾರೆ. ನಗರದಲ್ಲಿ ಮಾತನಾಡಿದ ಸಾ.ರಾ.ಮಹೇಶ್​, ಬೇರೆಯವ್ರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ನಾಯಕ ಕುಮಾರಣ್ಣ. ಪಕ್ಷದ ಹಿತದೃಷ್ಠಿಯಿಂದ ಅವರು ಹೇಳಿದ್ರೆ, ಇಂದೇ ರಾಜೀನಾಮೆ ಕೊಡುವೆ ಎಂದರು. ಐದು ವರ್ಷ ಕುಮಾರಣ್ಣ ಸಿಎಂ ಆಗಿರ್ತಾರೆ. ನಾಳೆ ಸಚಿವರ ಖಾತೆ ಹಂಚಿಕೆ ಸಾಧ್ಯತೆ ಇದೆ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸಿಎಂ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುವೆ ಎಂದು ಸ್ಪಷ್ಟಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contsct@firstnews.tv