ಬಿಗ್​ಬಾಸ್ ಮನೆಯಿಂದ ಆಸ್ಪತ್ರೆ ಸೇರಿದ ಎಸ್​.ಶ್ರೀಶಾಂತ್

ಟೀಮ್ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಶ್ರೀಶಾಂತ್​ ಸದಾ ಒಂದೆಲ್ಲಾ ಒಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಹಿಂದಿ ಬಿಗ್​ಬಾಸ್ 12ರ ಸ್ಪರ್ಧಿಯಾಗಿರುವ ಶ್ರೀಶಾಂತ್ ಗೋಡೆಗೆ ಹಣೆ ಚಚ್ಚಿಕೊಂಡು ಆಸ್ಪತ್ರೆ ಸೇರಿದ್ದಾರೆ.

ಆಗಿದ್ದೇನು?
ಬಿಗ್​​ಬಾಸ್ ಮನೆಯ ಸುರಭಿ ಅನ್ನೋ ಮಹಿಳಾ ಸದಸ್ಯೆ ಶ್ರೀಶಾಂತ್​ಗೆ ನೀವು ಮಹಿಳೆಗೆ ಗೌರವ ಕೊಡೋದಿಲ್ಲ. ನೀವೊಬ್ಬ ಹೆಣ್ಣುಬಾಕ ಎಂದು ನಿಂದಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶ್ರೀಶಾಂತ್ ಮೊದಲು ಅವರ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ನೇರವಾಗಿ ಶೌಚಾಲಯಕ್ಕೆ ತೆರಳಿ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಯಾರು ಎಷ್ಟೇ ಕರೆದ್ರೂ ಹೊರಗೆ ಬರದೇ ಶೌಚಾಲಯದಲ್ಲಿ ಗೋಡೆಗೆ ಹಣೆಕೊಟ್ಟು ಹೊಡೆದುಕೊಂಡಿದ್ದಾರೆ. ಇದರಿಂದ ಹಣೆಗೆ ತೀವ್ರ ಪೆಟ್ಟಾಗಿದ್ದರಿಂದ ಶ್ರೀಶಾಂತ್​​ರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಪಡೆದ ಬಳಿಕ ಶ್ರೀಶಾಂತ್ ಬಿಗ್​ಬಾಸ್ ಮನೆಗೆ ವಾಪಸ್ಸಾಗಿದ್ದಾರೆ ಎಂದು ಶ್ರೀಶಾಂತ್ ಪತ್ನಿ ಭುವನೇಶ್ವರಿ ಕುಮಾರ ಇನ್ಸ್​ಟ್ರಾಗ್ರಾಮ್ ಮೂಲಕ ಸ್ಪಷ್ಟಪಡಿಸಿದ್ದಾರೆ.