10,000 ಕೋಟಿ ಅನುದಾನ ತಂದಿದ್ರೆ, ಸಂಸದ ಸಿದ್ದೇಶ್ವರ್ ಲೆಕ್ಕ ತೋರಿಸಲಿ: ಮಲ್ಲಿಕಾರ್ಜುನ್

ದಾವಣಗೆರೆ: ಸಂಸದ ಜಿ.ಎಂ ಸಿದ್ದೇಶ್ವರ್ 10,000 ಕೋಟಿ ಅನುದಾನ ತಂದಿದಾರೆ ಅಂತಾ ಹೇಳ್ತಿದಾರೆ. ಎಲ್ಲಿಂದ ಎಷ್ಟೆಷ್ಟು ಅನುದಾನ ತಂದಿದ್ದಾರೆ ಎಂಬುದು ತೋರಿಸಲಿ. ದಾವಣಗೆರೆಯಲ್ಲಿ ಯಾರು ಯಾರು ಎಷ್ಟೆಷ್ಟು ಕೆಲಸ ಮಾಡಿದ್ದಾರೆ. ಸಿಟಿ ಡೆವಲಪ್​ಮೆಂಟ್ ಬಗ್ಗೆ ಏನೂ ಪ್ಲ್ಯಾನಿಂಗ್ ಮಾಡಿಲ್ಲ, ಈ ಬಗ್ಗೆ ನಾನು ಚಾಲೆಂಜ್ ಮಾಡ್ತೀನಿ ಎಂದು ಎಸ್. ಎಸ್ ಮಲ್ಲಿಕಾರ್ಜುನ್, ಸಂಸದ ಜಿ.ಎಂ ಸಿದ್ದೇಶ್ವರ್​ಗೆ ಸವಾಲ್​ ಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುಣಾವಣೆ ಕುರಿತು ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಗೊಂದಲವಿರುವ ಹಿನ್ನೆಲೆಯಲ್ಲಿ
ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ನನ್ನನ್ನೂ ಕರೆಯುವುದಾಗಿ ಹೇಳಿದ್ದಾರೆ. ಸಭೆಯಲ್ಲಿ ಏನ್ ಫೈನಲ್ ಆಗತ್ತೋ ನೋಡಿ ಹೇಳ್ತೀನಿ. ಅಭ್ಯರ್ಥಿ ಕುರಿತು ಈ ವಾರದಲ್ಲಿ ಫೈನಲ್ ಆಗುವ ಸಾಧ್ಯತೆ ಇದೆ ಎಂದರು.

ಇದೇ ವೇಳೆ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ನಿಧನ ವಿಷಯ ಕೇಳಿ ಬಹಳ ದುಃಖವಾಗಿದೆ. ಅವರ ಕುಟುಂಬಕ್ಕೆ  ದೇವರು ದುಖ: ಭರಿಸುವ ಶಕ್ತಿ ನೀಡಲಿ. ಅವರು ರಾಜ್ಯಕ್ಕೆ ಇನ್ನೂ  ಹೆಚ್ಚಿನ ಸೇವೆ ಮಾಡಬೇಕಾಗಿತ್ತು. ಆದರೆ ಅವರ ಅನಿರೀಕ್ಷಿತ ಸಾವಿನಿಂದ ಬಹಳ ದುಃಖವಾಗಿದೆ ಎಂದು ಸಂತಾಪ ಸೂಚಿಸಿದರು.