ದಾವಣಗೆರೆ ಉಸ್ತುವಾರಿ ಹೊಣೆ ಮಲ್ಲಿಕಾರ್ಜುನ್​ ಹೆಗಲಿಗೆ; ಕೆಪಿಸಿಸಿ ಅಚ್ಚರಿಯ ನಡೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊಣೆಯನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್​ ಹೆಗಲಿಗೆ ಹಾಕುವ ಮೂಲಕ ಕೆಪಿಸಿಸಿ ಅಚ್ಚರಿ ಮೂಡಿಸಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೈಕಮಾಂಡ್​ ಶಾಮನೂರು ಶಿವಶಂಕರಪ್ಪರಿಗೆ ಟಿಕೆಟ್​ ನೀಡಿತ್ತು. ಆದ್ರೆ ಶಿವಶಂಕ್ರಪ್ಪ ನಿರಾಕರಿಸಿದ್ರು. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್​ ಹೆಸರು ಕೇಳಿ ಬಂದಿತ್ತು. ಜೊತೆಗೆ ಮಂಜಪ್ಪ ಹಾಗೂ ತೇಜಸ್ವಿ ಪಟೇಲ್ ಹೆಸರು ತಳುಕು ಹಾಕಿಕೊಂಡಿದ್ವು. ಸದ್ಯ ಕೆಪಿಸಿಸಿ ಇನ್ನೂ ಅಭ್ಯರ್ಥಿ ಯಾರು ಎಂಬುದನ್ನ ಇನ್ನೂ ನಿಗೂಢವಾಗಿಟ್ಟಿದೆ. ಆದ್ರೆ ಕೆಪಿಸಿಸಿ ಯಿಂದ ಮಲ್ಲಿಕಾರ್ಜುನಗೆ ದಾವಣಗೆರೆ ಕ್ಷೇತ್ರದ ಉಸ್ತುವಾರಿ ಹೊಣೆ ನೀಡಿದೆ. ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೆರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ ಘೋರ್ಪಡೆ ರಾಜ್ಯದ 27 ಲೋಕ ಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನು ಎಸ್.ಎಸ್. ಮಲ್ಲಿಕಾರ್ಜುನ್​ಗೆ ನೀಡಿದ್ದಾರೆ.