ಪ್ರಧಾನಿ ಮೋದಿಯನ್ನ ಸ್ವಾಗತಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ

ಧಾರವಾಡ :  ಪ್ರಧಾನಿ ನರೇಂದ್ರ ಮೋದಿ ಅವರು ಇದೀಗತಾನೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೋಟೋಕಾಲ್​​​ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸ್ವಾಗತಿಸಿದರು. ಅದಾದನಂತರ ಮೇಯರ್ ಸುಧೀರ್ ‌ಸರಾಪ್, ಉಪ ಮೇಯರ್ ಮೇನಕಾ‌ ಹುರಳಿ, ಜಿಲ್ಲಾಧಿಕಾರಿ ದೀಪಾ ಚೋಳನ್​​, ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಹಾಗೂ ಕೆಲ ಬಿಜೆಪಿ ಮುಖಂಡರು ಸ್ವಾಗತ ಕೋರಿದರು.

ಎಸ್.ಪಿ.ಜಿ ಬಂದೋಬಸ್ತ್ ನಡುವೆ ಪ್ರಧಾನಿ ಮೋದಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೆಎಲ್​​ಇ ಮೈದಾನಕ್ಕೆ ಕಾರಿನಲ್ಲಿ‌ ಆಗಮಿಸಿದರು. ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದ ಜನ ಮೋದಿ ಮೋದಿ ಎಂದು ಕೂಗು ಹಾಕಿದರು.

ಇನ್ನು, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್​​ ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್​ ಜೋಶಿ, ಜಗದೀಶ್​ ಶೆಟ್ಟರ್​​, ಆರ್​ ಅಶೋಕ್, ಗೋವಿಂದ ಕಾರಜೋಳ, ಚಂದ್ರಕಾಂತ್​ ಬೆಲ್ಲದ್​​​ ಮುಂತಾದ ನಾಯಕರು ಸಹ ತಮ್ಮ ನಾಯಕನಿಗೆ ಸ್ವಾಗತ ಕೋರಲು ಕೆಎಲ್​ಇ ಮೈದಾನದಲ್ಲಿ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮೋದಿ ಚುನಾವಣಾ ರಣಕಹಳೆಗೆ ಕೌಂಟ್​ಡೌನ್​..!


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv