ಶಿವಳ್ಳಿ ಬಹಳ ಸರಳ, ಸಜ್ಜನ, ನಿಷ್ಠಾವಂತ, ವ್ಯಕ್ತಿಯಾಗಿದ್ರು: ಆರ್ ವಿ ದೇಶಪಾಂಡೆ

ಹುಬ್ಬಳ್ಳಿ: ಸಚಿವ ಶಿವಳ್ಳಿ ಬಹಳ ಸರಳ, ಸಜ್ಜನ, ನಿಷ್ಠಾವಂತ, ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ರು. ಇಂದು ನಾವು ಅವರನ್ನು ಕಳೆದುಕೊಂಡಿದ್ದೇವೆ ಇದು ನನಗೆ ನೋವಿನ ಸಂಗತಿಯಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಶಿವಳ್ಳಿ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ನನ್ನ ಆತ್ಮೀಯ ಸ್ನೇಹಿತ. ಶಿವಳ್ಳಿ ಹಿಂದೆಯೇ ಸಚಿವರಾಗಬೇಕಿತ್ತು. ಆದ್ರೆ, ಮೂರು ತಿಂಗಳ ಹಿಂದೆ ಅವರು ಸಚಿವರಾಗಿದ್ರು. ಈಗ ಅವರು ನಮ್ಮ ಜೊತೆಗಿಲ್ಲ ಅನ್ನೋದು ನೋವಿನ ಸಂಗತಿ ಎಂದರು. ಅಲ್ಲದೇ, ಧಾರವಾಡದಲ್ಲಿ ಕಟ್ಟಡ ಕುಸಿತ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಕಟ್ಟಡ ಕುಸಿತ ಪ್ರಕರಣ ಸಂಬಂಧ ಈಗಾಗಲೇ ಏಳು ಜನರನ್ನ ಅಮಾನತ್ತು ಮಾಡಲಾಗಿದೆ. ತನಿಖೆಯ ವರದಿ ಬಂದ ನಂತರ ಪಾರದರ್ಶಕ ಕ್ರಮ ತೆಗಿದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv