‘ಕವಚ’ವನ್ನು ಮೀರಿಸಲಿದೆ ‘ರುಸ್ತುಂ’..!

ಭಾರತೀಯ ಚಿತ್ರರಂಗದ ಸ್ಟಾರ್​ ಆ್ಯಕ್ಷನ್​ ಡೈರೆಕ್ಟರ್​ ರವಿವರ್ಮಾ ನಿರ್ದೇಶನದಲ್ಲಿ ಸೆಂಚುರಿಸ್ಟಾರ್ ಶಿವರಾಜ್​ಕುಮಾರ್ ನಟಿಸಿರೋ ಬಹುನಿರೀಕ್ಷಿತ ರುಸ್ತುಂ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಶಿವಣ್ಣ ಖಡಕ್ ಪೊಲೀಸ್​ ಅಧಿಕಾರಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ಮಾಸ್​ ಪಂಚಿಂಗ್ ಡೈಲಾಗ್​ ಮೂಲಕ ಅಬ್ಬರಿಸಿದ್ದಾರೆ. ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕಾಡೋ ಮೂಲಕ ರೌಡಿಸಂ ಅಂದ್ರೆ ನಂಗೆ ತುಂಬಾನೇ ಅಲರ್ಜಿ ಅಂತಾ ಎನ್​ಕೌಂಟರ್​ನಲ್ಲೇ ಖದರ್ ತೋರಿಸಿದ್ದಾರೆ.

ಶಿವಣ್ಣನ ಜೊತೆ ಶ್ರದ್ದಾ ಕಮಾಲ್..!
ಶಿವಣ್ಣನ ಹೊಸ ಗೆಟಪ್, ಪಂಚಿಂಗ್ ಡೈಲಾಗ್​ಗಳು ಸಖತ್ ಎನರ್ಜಿ ಕೊಟ್ಟಿದ್ದು ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ. ಇನ್ನು ಚಿತ್ರದಲ್ಲಿ ಲವ್ ಸೆಂಟಿಮೆಂಟ್ ಕೂಡ ಇದ್ದು ಶಿವಣ್ಣನಿಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಕಮಾಲ್ ಮಾಡಿದ್ದಾರೆ. ಅಲ್ಲದೇ ವಿವೇಕ್ ಒಬೆರಾಯ್ ಪೊಲೀಸ್ ಆಗಿ ಮಿಂಚಿದ್ದಾರೆ. ಚಿತ್ರ ಸ್ಟೈಲಿಶ್​ ಸ್ಟಂಟ್ ಹಾಗೂ ಮೇಕಿಂಗ್​ನಿಂದ ಕ್ಯೂರಿಯಾಸಿಟಿ ಮೂಡಿಸಿದ್ದು ಟ್ರೈಲರ್​ ಕೂಡ ನಿರೀಕ್ಷೆ ಹೆಚ್ಚಿಸಿದೆ. ಶಿವಣ್ಣನ ಬತ್ತಳಿಕೆಯಲ್ಲಿ ಈಗಾಗಲೇ ಸಾಲು ಸಾಲು ಬಿಗ್ ಹಿಟ್ ಸಿನಿಮಾಗಳಿದ್ದು ರುಸ್ತುಂ ಕೂಡ ನಿರೀಕ್ಷೆ ಹೆಚ್ಚಿಸಿದೆ. ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರಕ್ಕೆ ಶಿವಣ್ಣ ಬಣ್ಣ ಹಚ್ಚಿದ್ದು ಪ್ರತಿ ದೃಶ್ಯವೂ ಆ್ಯಕ್ಷನ್​ ಸೀಕ್ವೆನ್ಸ್​ನಂತೆಯೇ ಮೂಡಿಬಂದಿದೆ. ಶಿವಣ್ಣ ಕೂಡ ಅಭಿಮಾನಿಗಳ ಜೊತೆ ಚಿತ್ರ ನೋಡಲು ಕಾತರದಿಂದ ಕಾಯ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು ಜಯಣ್ಣ -ಬೋಗೆಂದ್ರ ಬಂಡವಾಳ ಹೂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv