ಐಸ್​​ ಹಾಕಿಯಲ್ಲಿ 10 ಗೋಲ್ ಬಾರಿಸಿ, ನಂತ್ರ ಮುಗ್ಗರಿಸಿ ಬಿದ್ರು ರಷ್ಯಾ ಅಧ್ಯಕ್ಷ ಪುಟಿನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಐಸ್​​​ ಹಾಕಿ ಪಂದ್ಯಗಳನ್ನ ಆಡೋದ್ರಲ್ಲಿ ಎತ್ತಿದ ಕೈ. ಇತ್ತೀಚೆಗೆ ಅವರು ಐಸ್​​ ಹಾಕಿ ಪಂದ್ಯದಲ್ಲಿ ಭಾಗವಹಿಸಿ ತಮ್ಮ ಕೌಶಲ್ಯ ತೋರಿದ್ರು. ಕಳೆದ ಶುಕ್ರವಾರ ಸೋಚಿಯಲ್ಲಿ ನಡೆದ 8ನೇ ಆಲ್​​ ರಷ್ಯನ್ ನೈಟ್​ ಹಾಕಿ ಲೀಗ್​ ಫೆಸ್ಟಿವಲ್​​​ನಲ್ಲಿ ಭಾಗವಹಿಸಿದ ಪುಟಿನ್,​​​ 10 ಗೋಲ್​ಗಳನ್ನ ಬಾರಿಸಿದ್ರು. 14:7 ಸ್ಕೋರ್​​ನೊಂದಿಗೆ ಪುಟಿನ್​ ಅವರ ತಂಡ ಜಯ ಸಾಧಿಸಿತು. ಆದ್ರೆ ಈ ಗೆಲುವಿನ ಸಂಭ್ರಮದಲ್ಲಿರುವಾಗಲೇ ಪುಟಿನ್​​ ಮುಜುಗರಕ್ಕೀಡಾದ ಘಟನೆ ನಡೆದಿದೆ. ಪಂದ್ಯ ಗೆದ್ದ ನಂತರ ಪುಟಿನ್​​, ತಮ್ಮ ಸಹ ಆಟಗಾರರೊಂದಿಗೆ ಸೇರಿ ಜನರತ್ತ ಕೈಬೀಸಿ ಸ್ಕೇಟ್​​ ಮಾಡುತ್ತಿದ್ದರು. ಈ ವೇಳೆ ಅವರು ಮುಗ್ಗರಿಸಿ ಕೆಳಗೆ ಬಿದ್ದಿದ್ದಾರೆ. ಬಳಿಕ ಕೂಡಲೇ ಮೇಲೆದ್ದ ಪುಟಿನ್, ನಗುತ್ತಲೇ ಮತ್ತೆ ಜನರತ್ತ ಕೈಬೀಸೋದನ್ನ ಮುಂದುವರೆಸಿದ್ರು. ಪುಟಿನ್​​ 10 ಗೋಲ್​ ಬಾರಿಸಿದ್ರೂ ಅನ್ನೋದಕ್ಕಿಂತ ಮುಗ್ಗರಿಸಿ ಬಿದ್ದ ವಿಷಯವೇ ಹೆಚ್ಚು ಸುದ್ದಿಯಾಗ್ತಿದೆ. ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಪುಟಿನ್​​ ಐಸ್​ ಮೇಲೆ ಮುಗ್ಗರಿಸಿದ್ದು ಇದೇ ಮೊದಲೇಬಲ್ಲ. 2016ರಲ್ಲೂ ಪಂದ್ಯವೊಂದ್ರಲ್ಲಿ ಒಂದೇ ಒಂದು ಗೋಲ್​​ ಬಾರಿಸಿದ್ದ ಪುಟಿನ್​​​, ಮುಗ್ಗರಿಸಿ ಬಿದ್ದಿದ್ರು. ಆದ್ರೂ ತಾನೊಬ್ಬ ಉತ್ತಮ ಹಾಕಿ ಆಟಗಾರ ಎಂದು ಪುಟಿನ್ ಗುರುತಿಸಿಕೊಂಡಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv