ಗ್ರಾಮೀಣ ಅಂಚೆ ನೌಕರರ ಕೆಲಸ ಖಾಯಂ ಮಾಡುವಂತೆ ಒತ್ತಾಯ

ಯಾದಗಿರಿ: ವೇತನ ಹೆಚ್ಚಳ ಸೇರಿದಂತೆ ನೌಕರಿ ಖಾಯಂ ಮಾಡುವಂತೆ ಒತ್ತಾಯಿಸಿ ಇಂದು ಗ್ರಾಮೀಣ ಅಂಚೆ ನೌಕರರು ಯಾದಗಿರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಯಾದಗಿರಿಯ ಅಂಬೇಡ್ಕರ್ ನಗರ ಪೋಸ್ಟ್​​ ಆಫೀಸ್​ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ರಾಜ್ಯದ್ಯಂತ 16 ಸಾವಿರಕ್ಕೂ ಹೆಚ್ಚು ಗ್ರಾಮೀಣ ನೌಕರರಿದ್ದು, ನೂರಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕನಿಷ್ಠ ವೇತನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾದಗಿರಿಯಲ್ಲಿ ಸುಮಾರು 500ಕ್ಕೊ ಹೆಚ್ಚು ಗ್ರಾಮೀಣ ಅಂಚೆ ನೌಕರರಿದ್ದು, ಯಾರಿನ್ನೂ ಖಾಯಂ ಮಾಡಿಕೊಂಡಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ನೌಕರರಿಗೆ 6ನೇ, ಹಾಗು 7ನೇ ವೇತನ ಹೆಚ್ಚಳ ಮಾಡಿದಂತೆ ಅಂಚೆ ನೌಕರರಿಗೆ ಮಾಡಿಲ್ಲ. 4 ರಿಂದ 8 ಸಾವಿರದ ವರೆಗೆ ವೇತನ ನೀಡುತ್ತಿದ್ದು ಜೀವನ ನಡೆಸುವುದಕ್ಕೆ ಸಾಕಾಗುತ್ತಿಲ್ಲ. ಕೇಂದ್ರ ಸರ್ಕಾರದ ಎಸ್.ಬಿ ಖಾತೆ, ಆರ್.ಡಿ ಖಾತೆ, ಟಿ.ಡಿ ಗ್ರಾಮೀಣ ಅಂಚೆ ಖಾತೆ ಹಾಗೂ ಸುಕನ್ಯಾ ಯೋಜನೆ ಅಂತ ಹತ್ತು ಹಲವು ಯೋಜನೆಗಳು ಜಾರಿಯಲ್ಲಿದ್ದು, ರಾತ್ರಿ ಹಗಲು ಎನ್ನದೇ ಗ್ರಾಮೀಣ ಭಾಗದಲ್ಲಿ ದುಡಿಯುತ್ತಿದ್ದರೂ ಕೇಂದ್ರ ಸರ್ಕಾರ ನೌಕರಿ ಖಾಯಂ ಮಾಡುತ್ತಿಲ್ಲ. ಕೂಡಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ನೌಕರರನ್ನು ಖಾಯಂ ಮಾಡಿಕೊಂಡು ಎಲ್ಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv