ಈಗ ಭಾರತದ ರೂಪಾಯಿ ಏಷ್ಯಾದಲ್ಲೇ ಬೆಸ್ಟ್​ ಪರ್ಫಾರ್ಮಿಂಗ್​​​ ಕರೆನ್ಸಿ..!

5 ವಾರಗಳ ಹಿಂದೆ ಭಾರತದ ರೂಪಾಯಿಯನ್ನ ಏಷ್ಯಾದ ವರ್ಸ್ಟ್ ಪರ್ಫಾರ್ಮಿಂಗ್​​​​​​ ಕರೆನ್ಸಿ ಎಂದು ಕರೆಯಲಾಗ್ತಿತ್ತು. ಈಗ ಅದು ಉಲ್ಟಾ ಆಗಿದೆ. ಭಾರತದ ರೂಪಾಯಿ ಈಗ ಏಷ್ಯಾದ ಬೆಸ್ಟ್​ ಪರ್ಫಾರ್ಮಿಂಗ್ ಕರೆನ್ಸಿಯಾಗಿದೆ. ಈ ಬೆಳವಣಿಗೆಗೆ ಕಾರಣ ಕಳೆದ ಕೆಲವು ವಾರಗಳಲ್ಲಿ ನಡೆದ ಘಟನೆಗಳು. ಭಾರತ ಪಾಕಿಸ್ತಾನದ ನಡುವಿನ ಸಂಬಂಧ ಇತ್ತೀಚೆಗೆ ಬಿಗುಡಾಯಿಸಿದ್ದು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಂಭಾವ್ಯತೆ ಹೆಚ್ಚಾಗಿರುವುದು ರೂಪಾಯಿಯ ಮೌಲ್ಯ ಏರಿರುವುದಕ್ಕೆ ಪ್ರಮುಖ ಎರಡು ಕಾರಣಗಳು ಎಂದು ಹೇಳಲಾಗಿದೆ.

ಪ್ರಸ್ತುತ ಡಾಲರ್​ ಎದುರು ರೂಪಾಯಿ ಮೌಲ್ಯ 68.82 ಇದೆ. ಆರ್ಥಿಕ ತಜ್ಞರೊಬ್ಬರು ಹೇಳಿರುವ ಪ್ರಕಾರ, ಕೇಂದ್ರದಲ್ಲಿ ಮೋದಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದರೆ ರೂಪಾಯಿ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜೂನ್​​ ಅಂತ್ಯದ ವೇಳೆಗೆ ಡಾಲರ್​ ಎದುರು ರೂಪಾಯಿ ಮೌಲ್ಯ 67 ಆಗಬಹುದು ಎಂದು ಅವರು ಹೇಳಿದ್ದಾರೆ. ಮಾರ್ಚ್​​ 18ರಂದು ವಿದೇಶಿ ಹೂಡಿಕೆದಾರರು 3.3 ಬಿಲಿಯನ್ ಡಾಲರ್​​ ಮೊತ್ತದ ಶೇರ್​ಗಳನ್ನ ಖರೀದಿಸಿದ್ದಾರೆ. ಹಾಗೇ ಬಾಂಡ್​​ಗಳು ಒಂದೇ ತಿಂಗಳಲ್ಲಿ 1.4 ಬಿಲಿಯನ್​ ಡಾಲರ್​​​ನಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.