ಈಗಲ್​​ಟನ್ ರೆಸಾರ್ಟ್​​​​ ಗಲಾಟೆ: ಎಂ.ಬಿ.ಪಾಟೀಲ್ ವಿರುದ್ಧ ಆರ್​ಟಿಐ ಕಾರ್ಯಕರ್ತನಿಂದ ದೂರು

ದಾವಣಗೆರೆ: ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ದೂರು ದಾಖಲಿಸಲು ಆರ್​​​​ಟಿಐ ಕಾರ್ಯಕರ್ತರೊಬ್ಬರು ರಾಷ್ಟಪತಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ದಾವಣಗೆರೆ ಮೂಲದ ಆರ್​​ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಎಂಬುವವರು ಗೃಹ ಸಚಿವರ ಸದಸ್ಯತ್ವ ರದ್ದು ಮಾಡುವಂತೆ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಬಿಡದಿಯ ಈಗಲ್​​ಟನ್ ರೆಸಾರ್ಟ್​​​​ನಲ್ಲಿ ನಡೆದ ಗಲಾಟೆಗೆ ಎಂ.ಬಿ.ಪಾಟೀಲ್ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಹರೀಶ್ ಹಳ್ಳಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇಲಾಖೆ ಕಂಪ್ಲಿ ಶಾಸಕ ಗಣೇಶ್​ ಬೆನ್ನ ಹಿಂದೆ ಬಿದ್ದಿದೆ -ಎಂ.ಬಿ ಪಾಟೀಲ್​

ಕಳೆದ ತಿಂಗಳು ಈಗಲ್​​​​ಟನ್ ರೆಸಾರ್ಟ್​​​​ನಲ್ಲಿ ಕಂಪ್ಲಿ ಶಾಸಕ ಗಣೇಶ್ ಹಾಗೂ ವಿಜಯನಗರ ಶಾಸಕ ಅನಂದ್ ಸಿಂಗ್ ನಡುವೆ ಗಲಾಟೆಯಾಗಿತ್ತು. ಎಂ.ಬಿ.ಪಾಟೀಲ್ ಅವರು, ಹಲ್ಲೆ ವಿಚಾರ ಮುಚ್ಚಿ ಹಾಕುವ ದುರುದ್ದೇಶದಿಂದ ಆನಂದ್ ಸಿಂಗ್​​ಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಶಾಸಕ ಗಣೇಶ್ ರೆಸಾರ್ಟ್​​​​ನಿಂದ ತಪ್ಪಿಸಿಕೊಳ್ಳಲು ಗೃಹ ಸಚಿವರೇ ನೇರ ಹೊಣೆ ಎಂದು ಮನವಿಯಲ್ಲಿ ಹರೀಶ್ ಹಳ್ಳಿ ಉಲ್ಲೇಖಿಸಿದ್ದಾರೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಎಂ.ಬಿ.ಪಾಟೀಲ್ ಸುಳ್ಳು ಹೇಳಿಕೆ ನೀಡಿ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಹರೀಶ್ ಹಳ್ಳಿ ಆರೋಪಿಸಿದ್ದಾರೆ. ಎಂ.ಬಿ.ಪಾಟೀಲ್ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಉಪ ಕಾಯ್ದೆ 8/ಎ ಅನ್ನು ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಐಪಿಸಿ ಸೆಕ್ಷನ್ 306ರಡಿ ಮಾರಣಾಂತಿಕ ಹಲ್ಲೆ, ಕೊಲೆ ಯತ್ನ, ಪ್ರಚೋದನೆ ಆರೋಪದಡಿ ಎಂ.ಬಿ ಪಾಟೀಲ್​​ರನ್ನು ಬಂಧಿಸುವಂತೆ ಹರೀಶ್ ಹಳ್ಳಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv