ಮ್ಯಾಚ್​ ಗೆದ್ದ ಕೊಹ್ಲಿ, ಮನಸ್ಸು ಗೆದ್ದ ಧೋನಿ

ಬೆಂಗಳೂರು: ನಿನ್ನೆ ಬೆಂಗಳೂರಲ್ಲಿ ನಡೆದ ಐಪಿಎಲ್​ನ ರೋಚಕ ಮ್ಯಾಚ್​ನಲ್ಲಿ ಆರ್​ಸಿಬಿ ಸ್ವಲ್ಪದರಲ್ಲೇ ಸೋಲಿನ ಸುಳಿಯಿಂದ ಪಾರಾಯ್ತು. ಜಸ್ಟ್​ ಒಂದು ರನ್​ನಿಂದ ಕ್ಯಾಪ್ಟನ್​ ಕೊಹ್ಲಿ ಪಡೆ ಜಯದ ನಗು ಬೀರಿತು. ಕೊನೆಯ ಬಾಲ್​ವರೆಗೂ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಲಾಸ್ಟ್​ ಬಾಲ್​ನಲ್ಲಿ ಸಿಎಸ್​ಕೆ ತಂಡದ ಲೆಕ್ಕಾಚಾರ ಉಲ್ಟಾ ಆಯ್ತು. ಅಷ್ಟೆ ಅಲ್ಲದೇ, ಮ್ಯಾಚ್​ ವಿನ್ನರ್​ ಸ್ಪೆಷಲಿಸ್ಟ್​ ಧೋನಿ ಕೈನಿಂದಲೇ ಮ್ಯಾಚ್​ ತಪ್ಪಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್​ನಲ್ಲಿ ಆರ್​ಸಿಬಿ ನೀಡಿದ್ದ 162 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ, ಆರಂಭದಲ್ಲಿ ಸಂಕಷ್ಟಕ್ಕೆ ಈಡಾಗಿತ್ತು. ಆರಂಭಿಕ ಹಂತದ 4 ವಿಕೆಟ್​​ಗಳನ್ನ ಜಸ್ಟ್​ 30ಕ್ಕೆ ಕಳೆದುಕೊಂಡ ಸಿಎಸ್​ಕೆ ಆರ್​ಸಿಬಿಗೆ ಗೆಲ್ಲುವ ಮುನ್ಸೂಚನೆಯನ್ನ ತಾನೇ ಬಿಟ್ಟುಕೊಟ್ಟಿತ್ತು. ಮೊದಲ ಓವರ್​ನಲ್ಲೇ ಡೇಲ್ ಸ್ಟೇನ್​​ ಶೇನ್ ವಾಟ್ಸನ್(5) ಹಾಗೂ ಸರೇಶ್ ರೈನಾ(0) ವಿಕೆಟ್ ಕಿತ್ತರು. ಬಳಿಕ ಡುಪ್ಲೆಸಿಸ್(5) ಹಾಗೂ ಕೇದರ್ ಜಾಧವ್(9) ಉಮೇಶ್ ಯಾದವ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ್ರು.

ಬಳಿಕ ಬಂದ ನಾಯಕ ಎಂ.ಎಸ್ ಧೋನಿ, ಅಂಬಟಿ ರಾಯುಡು ಜೊತೆ ಇನ್ನಿಂಗ್ಸ್​ ಕಟ್ಟಿದ್ರು. ಈ ವೇಳೆ ಧೋನಿ ರಕ್ಷಣಾತ್ಮಕ ಆಟವಾಡ್ತಾ ಸಾಗಿದ್ರು. ಆದರೆ ಕೊನೆ ಹಂತದಲ್ಲಿ ಸ್ಫೋಟಕ ಆಟಕ್ಕೆ ಇಳಿದ ಕ್ಯಾಪ್ಟನ್​ ಕೂಲ್​ ಕೊಹ್ಲಿಯ ಮುಖ ಸೊರಗುವಂತೆ ಮಾಡಿದ್ರು. ಲಾಸ್ಟ್​ 12 ಬಾಲ್​ಗಳಲ್ಲಿ 36 ರನ್​ಗಳ ಅವಶ್ಯಕತೆ ಇದ್ದ ಮ್ಯಾಚ್​ನ್ನ ಧೋನಿ ಲಾಸ್ಟ್​ ಬಾಲ್​ನಲ್ಲಿ ಜಸ್ಟ್​ 2 ರನ್​ ಹೊಡೆದು ಜಯ ನಮ್ಮದೇ ಅನ್ನೋ ಸನ್ನಿವೇಶಕ್ಕೆ ಬದ್ಲಾಯಿಸಿದ್ರು.

ಆದರೆ, ಕೊನೆ ಓವರ್​ನ ಕೊನೆ ಬಾಲ್​ನಲ್ಲಿ ಉಮೇಶ್ ಯಾದವ್​ರ ಟ್ರಿಕ್​ ಉಪಯೋಗಕ್ಕೆ ಬಂತು, ಧೋನಿಯಿಂದ ಮೊದಲ ಎಸೆತದಲ್ಲಿ ಬೌಂಡರಿ ಹೊಡೆಸಿಕೊಂಡಿದ್ದ ಉಮೇಶ್​ ಎರಡನೇ ಎಸೆತದಲ್ಲಿ ಸಿಕ್ಸ್​ ಹೊಡೆಸಿಕೊಂಡ್ರು. ಬಳಿಕ ಮೂರನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ , 5ನೇ ಎಸೆತದಲ್ಲಿಯು ಸಿಕ್ಸ್​ ಹೊಡೆಸಿಕೊಂಡರು. ಕೊನೆ ಬಾಲ್​ನ್ನ ಕರಾರುವಕ್ಕಾಗಿ ಮಾಡಿದ ಉಮೇಶ್​ ಯಾದವ್​, ಧೋನಿ ಅದನ್ನು ಮಿಸ್​ ಮಾಡ್ಕೊಳ್ಳುವಂತೆ ಮಾಡಿದ್ರು. ಹೀಗೆ ಚೆಂಡನ್ನ ಮಿಸ್​ ಮಾಡ್ಕೊಂಡ ಧೋನಿ, ಮ್ಯಾಚ್​​ ಟೈ ಮಾಡ್ಕೊಳ್ಳೋದಕ್ಕೆ ರನ್​ ಕದಿಯಲು ಮುಂದಾದ್ರು. ಈ ವೇಳೆ ಧೋನಿಯ ಬ್ಯಾಟ್​ನಿಂದ ಮಿಸ್​ ಆಗಿದ್ದ ಬೌಲನ್ನ ಸೇಫ್​ ಆಗಿ ಹಿಡಿದಿದ್ದ ಕೀಪರ್​ ಪಾರ್ಥಿವ್​ ಪಟೇಲ್​ ರನ್​ ಔಟ್​ ಮಾಡಿದ್ರು. ಶಾರ್ದೂಲ್ ಠಾಕೂರ್​ ಮಿಂಚಿನ ವೇಗದಲ್ಲಿ ಕ್ರೀಸ್​ ತಲುಪುವ ಪ್ರಯತ್ನ ಮಾಡಿದರಾದರೂ, ಪಾರ್ಥಿವ್​ ಪಟೇಲ್​ ಮಾಡಿದ್ದ ಥ್ರೋ ಶಾರ್ದೂಲ್​ ಠಾಕೂರ್​ ಕ್ರೀಸ್​ ಮುಟ್ಟುವ ತುಸು ಮುನ್ನ ವಿಕೆಟ್​ ಉರುಳಿಸಿತ್ತು. ಈ ದೃಶ್ಯ ಥರ್ಡ್​ ಅಂಪೇರ್​ ಡಿಸಿಶನ್​ ತೋರಿಸುವ ದೊಡ್ಡ ಸ್ಕ್ರೀನ್​ನಲ್ಲಿ ಬಿತ್ತರವಾಗುತ್ತಲೇ ಆರ್​ಸಿಬಿ ಫ್ಯಾನ್ಸ್​ ಸಂಭ್ರಮ ಮುಗಿಲು ಮುಟ್ಟಿತ್ತು. ಇತ್ತ ಆರ್​ಸಿಬಿ ಕ್ಯಾಪ್ಟನ್​ ಕೊಹ್ಲಿ, ಹೋದ ಜೀವ ವಾಪಸ್​ ಬಂದಷ್ಟೆ ಖುಷಿಯಾಗಿ ಸಡಗರ ಪಟ್ಟರು..

ಇನ್ನೂ ಇದಕ್ಕೂ ಮೊದ್ಲು ಟಾಸ್​ ಗೆದ್ದಿದ್ದ ಧೋನಿ ಫೀಲ್ಡಿಂಗ್​ ಆಯ್ದುಕೊಂಡಿದ್ರು. ಇತ್ತ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ಕೊಹ್ಲಿ ಆರಂಭದಲ್ಲೇ ಔಟ್ ಆದರೆ, ಎಬಿ ಡಿ ವಿಲಿಯರ್ಸ್​ ಅದ್ಭುತ ಕ್ಯಾಚ್​ವೊಂದಕ್ಕೆ ಬಲಿಯಾದರು. ಆದರೆ ರಕ್ಷಣಾತ್ಮಕವಾಗಿ ಇನ್ನಿಂಗ್ಸ್​ ಕಟ್ಟಿದ ಪಾರ್ಥಿವ್ ಪಟೇಲ್​ 37 ಬಾಲ್​ ಗಳಲ್ಲಿ 4 ಸಿಕ್ಸ್​, 2 ಬೌಂಡರಿ ಜೊತೆ ಅರ್ಧಶತಕ ದಾಖಲಿಸಿದ್ರು. ನಂತರ ಮಾರ್ಕ್ಸ್​ ಸ್ಟೋಯಿನಿಸ್​ ಡುಪ್ಲೆಸಿಸ್​ನ ಅದ್ಭುತ ಕ್ಯಾಚ್​ಗೆ ವಿಕೆಟ್​ ಒಪ್ಪಿಸಿದ್ರು. ಇನ್ನು ಮೊಯಿನ್​ ಅಲಿ 16 ಬಾಲ್​ ನಲ್ಲಿ 26 ರನ್​ ಬಾರಿಸಿದರು. ಅಂತಿಮವಾಗಿ 7 ವಿಕೆಟ್​ ನಷ್ಟಕ್ಕೆ ಆರ್​ಸಿಬಿ 161 ಗಳಿಸಿತು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv