ನಿಲ್ಲದ ಪುಡಿ ರೌಡಿಗಳ ಹಾವಳಿ: ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ‌  ಪುಡಿ ರೌಡಿಗಳ ಹಾವಳಿ ನಿಲ್ತಿಲ್ಲ. ಸೆಕ್ಯೂರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ರಾಜೇಶ್ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ತಡರಾತ್ರಿ 2:30 ಸುಮಾರಿಗೆ ಘಟನೆ ನಡೆದಿದೆ.

ಅಸ್ಸಾಂ ಮೂಲದ ರಾಜೇಶ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ. ಹರಳೂರು ಬಳಿಯಿರುವ ಲಿಕ್ಕರ್ ಮಾರ್ಟ್ ಅನ್ನ ರಾಜೇಶ್ ನೋಡಿಕೊಳ್ಳುತ್ತಿದ್ದ. ಈ ವೇಳೆ ಇಬ್ಬರು ಯುವಕರು ಆಗಮಿಸಿದ್ದಾರೆ. ಬಳಿಕ ಈ ಲಿಕ್ಕರ್ ಮಾರ್ಟ್ ನಲ್ಲಿ ಕೆಲಸ ಖಾಲಿಯಿದೆಯಾ ಅಂತಾ ರಾಜೇಶ್‌ನನ್ನ ಕೇಳಿದ್ದಾರೆ. ಇದಕ್ಕೆ ಸೆಕ್ಯೂರಿಟಿ ಗಾರ್ಡ್ ನನಗೆ ಗೊತ್ತಿಲ್ಲ ಅಂದಿದ್ದಾನೆ, ಇದರಿಂದ ಕೋಪಗೊಂಡ ಪುಂಡರು ಕೈಯ್ಯಲ್ಲಿ ತಂದಿದ್ದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಇನ್ನು ಪಕ್ಕದಲ್ಲೇ ಇದ್ದ ಕ್ಯಾಬ್ ಡ್ರೈವರ್ ಸಹಾಯ ಕೇಳಿದರೂ ಸಹಾಯಕ್ಕೆ ಡ್ರೈವರ್ ಬಂದಿಲ್ಲ. ಈ ಬಗ್ಗೆ ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ರಾಜೇಶ್ ದೂರು ದಾಖಲಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv