₹500 ಕೋಟಿ ಒಡೆಯ ರಿಯಲ್​ ಎಸ್ಟೇಟ್​​​ ಉದ್ಯಮಿ ಮಿರ್ಲೆ ವರದರಾಜ್ ಯಾರು..?

ಬೆಂಗಳೂರು: ರಿಯಲ್​ ಎಸ್ಟೇಟ್​​​ ಉದ್ಯಮಿ ಮಿರ್ಲೆ ವರದರಾಜ್ ವಿರುದ್ಧ ಸಿಸಿಬಿಗೆ ಹಲವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವರದರಾಜ್ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸಾಕಷ್ಟು ದಾಖಲೆ ಪತ್ರಗಳನ್ನ ವಶ ಪಡೆದು, ಅವನನ್ನು ಬಂಧಿಸಿದ್ದರು.

ಯಾರು ಈ ಮಿರ್ಲೆ ವರದರಾಜ್​..?
ಮಿರ್ಲೆ ವರದರಾಜ್ ಮೂಲತಃ ಕೆ.ಆರ್ ನಗರದವನು. ಕೆ.ಆರ್ ನಗರದಲ್ಲಿ ಬೆಲ್ಲದ ವ್ಯಾಪಾರ ಮಾಡ್ತಿದ್ದ ಮಿರ್ಲೆ ವರದರಾಜ್. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದ. ಕೆಂಗೇರಿ, ಉಲ್ಲಾಳ, ಆರ್.ಆರ್ ನಗರ, ನಾಗರಭಾವಿ, ರಿಂಗ್ ರೋಡ್ ಸುತ್ತಾಮುತ್ತಲಿನ ರೌಡಿಗಳಿಗೆ ಫೈನಾನ್ಸ್ ಮಾಡ್ತಿದ್ದ. ಅಲ್ಲದೇ, ಕುಖ್ಯಾತ ರೌಡಿಶೀಟರ್ ರಾಮ, ಲಕ್ಷಣರಿಗೆ ಫೈನಾನ್ಸ್ ಮಾಡ್ತಿದ್ದದ್ದು ಇದೇ ಮಿರ್ಲೆ ಎನ್ನಲಾಗಿದೆ.

ಈತ, ಸರ್ಕಾರಿ ಜಾಗವನ್ನ ತೋರಿಸಿ ಸೈಟ್ ಕೊಡಿಸ್ತೀನಿ ಅಂತ ಅಮಾಯಕರಿಗೆ ವಂಚನೆ ಮಾಡಿರುವ ಆರೋಪ ಈತನ ಮೇಲಿದೆ. ಯಾರಾದರು ಪ್ರಶ್ನೆ ಮಾಡಿದ್ರೆ ರೌಡಿಗಳ ಮೂಲಕ ಧಮ್ಕಿ ಹಾಕಿಸೋವುದು. ಕೆಂಗೇರಿ ಸುತ್ತಮುತ್ತ ಏರಿಯಾದಲ್ಲಿ ಮಿರ್ಲೆ ಫುಲ್ ಫೇಮಸ್. ಯಾವುದೇ ಕಾರ್ಯಕ್ರಮಗಳಾದರೂ  ರಾಜಕೀಯ ಮುಖಂಡರ ಅಭಿಮಾನಿಯಂತೆ ಫುಲ್ ಪೋಸ್ ಕೊಡ್ತಿದ್ದ. ಆದ್ರೆ, ಮಿರ್ಲೆ ವರದರಾಜ್ ಯಾವುದೇ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ. ಯಾಱರು ಅಧಿಕಾರದಲ್ಲಿರುತ್ತಿದ್ದರೋ ಅವರ ಜೊತೆಗಿ ಫೋಟೋಗಳ ಫ್ಲೆಕ್ಸ್ ಹಾಕಿಸ್ತಿದ್ದ ಈ ಕಿಲಾಡಿ. ತನಗೆ ರಾಜಕೀಯ ನಾಯಕರುಗಳು ತೀರ ಹತ್ತಿರದ ಪರಿಚಯ ಅಂತಾ ಬಿಂಬಿಸಿಕೊಳ್ತಿದ್ದ. ಈ‌ ಮೂಲಕ ಜನರಿಗೆ ಸೈಟ್ ಕೊಡಿಸೋದಾಗಿ ನಂಬಿಸಿ ಲಕ್ಷಗಟ್ಟಲೇ ಹಣಪೀಕಿ ವಂಚಿಸ್ತಿದ್ದ. ಅಲ್ಲದೇ, ಮಿರ್ಲೆ ವರದರಾಜ್​ನ ವಂಚನೆಗೆ ಆತನ ಪತ್ನಿ ಗಿರಿಜಾ ಕೂಡ ಸಾಥ್ ನೀಡುತ್ತಿದ್ದಳಂತೆ.

₹500 ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿ ಜಪ್ತಿ
ಸದ್ಯ ಮಿರ್ಲೆ ವರದರಾಜ್​ನನ್ನು ಲ್ಯಾಂಡ್ ಗ್ರಾಬಿಂಗ್ ಆ್ಯಕ್ಟ್ ಅಡಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ವರದರಾಜ್ ಜೊತೆ ಅವನ ಆಪ್ತ ಡಿಪೊ ನಾಗನ್ನು ಬಂಧಿಸಲಾಗಿದೆ. ಇದೇ ವೇಳೆ, ಆತನ ಬಳಿ ಇದ್ದ ₹500 ಕೋಟಿಗೂ ಹೆಚ್ಚು ಬೆಲೆ ಬಾಳು ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಯ ಎರಡು ಬೀರುಗಳಲ್ಲಿ ಪತ್ತೆಯಾದ ಭೂಮಿಗೆ ಸಂಬಂಧ ಪಟ್ಟ ಪತ್ರಗಳು, ಐಶಾರಾಮಿ ಮರ್ಸಿಡಿ ಎಕ್ಸ್ ಯುವಿ ಕಾರ್ ಹಾಗೂ ಇನೋವಾ ಕಾರ್ ಹಾಗೂ ಮತ್ತೊಂದು ಕಾರ್ ಸೀಜ್ ಮಾಡಲಾಗಿದೆ. ಸೀಜ್ ಮಾಡಲಾದ ಎಲ್ಲಾ ದಾಖಲೆಗಳನ್ನು ಸಿಸಿಬಿ ಕಚೇರಿಗೆ ರವಾನೆ ಮಾಡಲಾಗಿದೆ.

ಮಿರ್ಲೆ ವರದರಾಜ್ ವಿರುದ್ಧದ ಕೇಸ್​ಗಳ ವಿವರ
ಮಿರ್ಲೆ ವರದರಾಜ್ ವಿರುದ್ಧ ಸಿಟಿ ಸಿವಿಲ್ ಕೊರ್ಟ್ ನಲ್ಲಿ 83 ಭೂ ವ್ಯಾಜ್ಯ ಕೇಸ್​ಗಳಿವೆ. ಸಾರ್ವಜನಿಕರು ಮಿರ್ಲೆ ವಿರುದ್ಧ 17 ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಮಿರ್ಲೆ ಪತ್ನಿ ಗಿರಿಜಾ ವಿರುದ್ಧವೂ 10 ಭೂ ವ್ಯಾಜ್ಯ ಕೇಸ್ ಗಳಿವೆ. ಅಲ್ಲದೇ, ಮಿರ್ಲೆ ವರದರಾಜ್ ಕೂಡಾ 16 ಮಂದಿ ವಿರುದ್ಧ ಕೊರ್ಟ್ ನಲ್ಲಿ‌ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾನೆ.