ಆಸ್ತಿ ದಕ್ಕಿಸಿಕೊಳ್ಳಲು ‘ಮನೆಮುರುಕ’ ರೌಡಿ ಶೀಟರ್ ಏನು ಮಾಡಿದ್ದಾನೆ ನೋಡಿ ..!

ಧಾರವಾಡ: ಆಸ್ತಿ ವಿಚಾರಕ್ಕೆ ರೌಡಿ ಶೀಟರ್​ವೊಬ್ಬ ಮನೆ ನೆಲಸಮ ಮಾಡಿರುವ ಆರೋಪ ನಗರದ ಕೆಲಗೇರಿ ಬಡಾವಣೆಯಲ್ಲಿ ಕೇಳಿಬಂದಿದೆ. ರೌಡಿಶೀಟರ್​​ ಲಾಜರಸ್​​ ಲುಂಜಲಾ ಎಂಬಾತ ಮನೆಯನ್ನು ನೆಲಸಮ ಮಾಡಿದ್ದಾನೆ ಎಂದು ವಾರಸುದಾರರು ಆರೋಪಿಸಿದ್ದಾರೆ.
ಹುಬ್ಬಳ್ಳಿಯ ಆರ್​​ಜಿಎಸ್​​ ಪ್ರದೇಶದಲ್ಲಿ ಒಂದು ಗುಂಟೆ ಜಾಗದಲ್ಲಿ ಮನೆ ಒಡತಿ ಕಲ್ಲಮ್ಮ ಪೂಜಾರ್​​​ ಮನೆ ಮಾಡಿಕೊಂಡಿದ್ದರು. ಈ ಮನೆಯ ಪಕ್ಕದಲ್ಲಿ ಸ್ವಲ್ಪ ಖಾಲಿ ಜಾಗವಿತ್ತು. ಆ ಜಾಗವನ್ನು ಲಾಜಲಸ್​ ಲುಂಜಾಲಾಗೆ ಕಲ್ಲಮ್ಮ ಪೂಜಾರ್​​ ಮಾರಾಟ ಮಾಡಿದ್ದರು. ಆದರೆ ಕೆಲವು ತಿಂಗಳು ಕಳೆದ ನಂತರ ಲಾಜರಸ್​​, ಕಲ್ಲಮ್ಮ ಪೂಜಾರ್​ ಇರುವ ಜಾಗವೂ ನನ್ನದೇ. ಅದನ್ನು ನಾನೇ ಖರೀದಿ ಮಾಡಿದ್ದೇನೆ ಎಂದು ಕಲ್ಲಮ್ಮ ಪೂಜಾರ್​​​ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟೇ, ಅಲ್ಲದೇ ಕೂಡಲೇ ಮನೆ ಖಾಲಿ ಮಾಡುವಂತೆ ದುಂಬಾಲು ಬಿದ್ದಿದ್ದಾನೆ ಎಂದು ಕಲ್ಲಮ್ಮ ಪೂಜಾರ್​​ ಕುಟುಂಬ ಆರೋಪಿಸಿದೆ. ಆದರೆ, ಮನೆಯನ್ನು ಖಾಲಿ ಮಾಡಲು ನಿರಾಕರಿಸಿದ್ದಕ್ಕೆ, ಕಲ್ಲಮ್ಮ ಪೂಜಾರ್​​ ವಿರುದ್ಧ ಸಿಟ್ಟಿಗೆದ್ದ ರೌಡಿ ಲಾಜರಸ್​​ ತನ್ನ ಬೆಂಬಲಿಲಗರೊಂದಿಗೆ ಬಂದು ಹಲ್ಲೆ ಮಾಡಿದ್ದಾನೆ. ಮಹಿಳೆಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟು ಬೆದರಿಸಿದ್ದಾನೆ. ಅಲ್ಲದೇ ನಿನ್ನೆ ಸಾಯಂಕಾಲ ಜೆಸಿಬಿ ತಂದು ಮನೆ ನೆಲಸಮ ಮಾಡಿದ್ದಾನೆ ಎಂದು ಕಲ್ಲಮ್ಮ ಪೂಜಾರ್​​ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv